ಮಂಗಳೂರು: ಅ 20: ಮಳೆಗಾಲ ಮುಗಿದು ದೀಪಾವಳಿ ಹಬ್ಬ ಬರುತ್ತಲೇ ತುಳುನಾಡಿನಲ್ಲಿ ಕಂಬಳದ ಸಿದ್ಧತೆ ಭರದಿಂದ ಆರಂಭಗೊಳ್ಳುತ್ತದೆ. ಕಳೆದೆರಡು ಕಂಬಳದ ಸೀಸನಿಗೆ ಕೊವೀಡ್ ಭಾಗಶ: ಪರಿಣಾಮ ಭೀರಿತ್ತು. ಇದೀಗ ಮುಂದಿನ ಕಂಬಳ ಋತುವಿಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳು ಅಣಿಯಾಗುತ್ತಿವೆ. ಕಂಬಳ ಕರೆಗಳ ದುರಸ್ತಿ ಕೆಲಸಗಳಿಗೂ ಚಾಲನೆ ನೀಡಲಾಗಿದೆ.
ಜಿಲ್ಲಾ ಕಂಬಳ ಸಮಿತಿಯ ಪಧಾದಿಕಾರಿಗಳು 2021-22ನೇ ಸಾಲಿನ ಕಂಬಳ ಕೂಟ ನಡೆಸುವ ಬಗ್ಗೆ ಚರ್ಚಿಸಲು ಮಂಗಳವಾರ ಮಂಗಳೂರಿನಲ್ಲಿ ಸಭೆ ಸೇರಿದ್ದರು. ಮೂರು ಜಿಲ್ಲೆಗಳಲ್ಲಿ ಬಹುತೇಕ ಕಂಬಳ ಕೂಟಗಳು ಜಿಲ್ಲಾ ಕಂಬಳ ಸಮಿತಿಯ ನಿರ್ದೇಶನಕ್ಕೆ ಒಳಪಟ್ಟು ಆಯೋಜಿಸಲಾಗುತ್ತದೆ. ಈ ಕೂಟಗಳನ್ನು ಆಯೋಜಿಸುವ ಈ ಸಮಿತಿಗಳ ಮುಖ್ಯಸ್ಥರೊಡನೆ ಜಿಲ್ಲಾ ಸಮಿತಿಯ ಮುಖಂಡರುಗಳು ಸಮಾಲೋಚನೆ ನಡೆಸಿ, ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ಕಂಬಳ ನಡೆಸಲು ದಿನಾಂಕ ನಿಗದಿ ಮಾಡಿದ್ದಾರೆ.
ನ.27ರಿಂದ 2022ರ ಮಾರ್ಚ್ 26ರ ವರೆಗೆ ಒಟ್ಟು 17 ಕಂಬಳ ಕೂಟಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಮೊದಲ ಕಂಬಳ ಮೂಡುಬಿದಿರೆಯಲ್ಲಿ ಹಾಗೂ ಕೊನೆಯ ಕಂಬಳ ವೇಣೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.ವೇಳಾಪಟ್ಟಿ ಪ್ರಕಟಗೊಂಡಿದ್ದರೂ, ಕೆಲವು ಕಂಬಳಗಳ ದಿನಾಂಕಗಳು ಬದಲಾಗುವ ಸಾಧ್ಯತೆಗಳಿವೆ ಎಂದು ಸಮಿತಿ ಅಧ್ಯಕ್ಷ ಪಿ.ಆರ್.ಶೆಟ್ಟಿ ತಿಳಿಸಿದ್ದಾರೆ.

ಸಭೆಯಲ್ಲಿ ನಿರ್ಧಾರವಾಗಿರುವ ಕಂಬಳ ವೇಳಾಪಟ್ಟಿ: ( ಅಂತಿಮ ಬದಲಾವಣೆಗಳನ್ನು ಹೊರತು ಪಡಿಸಿ )
ನ.27 ಮೂಡುಬಿದಿರೆ
ಡಿ.11 ಹೊಕ್ಕಾಡಿ
ಡಿ.18 ಮಂಗಳೂರು
ಡಿ.26 ಮೂಲ್ಕಿ
ಜ.1 ಕಕ್ಕೆಪದವು
ಜ.8 ಅಡ್ವೆ ನಂದಿಕೂರು
ಜ.16 ಮಿಯ್ಯರು
ಜ.22 ಪುತ್ತೂರು
ಜ.29 ಐಕಳ
ಫೆ.5 ಬಾರಾಡಿ
ಫೆ.12 ಜೆಪ್ಪು
ಫೆ.19 ವಾಮಂಜೂರು
ಫೆ.26 ಪೈವಳಿಕೆ
ಮಾ.5 ಕಟಪಾಡಿ
ಮಾ.12 ಉಪ್ಪಿನಂಗಡಿ
ಮಾ.19 ಬಂಗಾಡಿ
ಮಾ.26 ವೇಣೂರು
ಸಮಿತಿ ಸದಸ್ಯರೊಂದಿಗೆ ಚರ್ಚಿಸಿ ಈ ಬಾರಿ ಕಂಬಳ ಆಯೋಜಿಸುವ ನಿಟ್ಟಿನಲ್ಲಿ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಒಟ್ಟು 17 ಕಂಬಳ ಕೂಟ ಆಯೋಜನೆಗೊಳ್ಳಲಿದ್ದು, ಅನಿರೀಕ್ಷಿತ ಬದಲಾವಣೆ ಹೊರತುಪಡಿಸಿ ಇದೇ ಅಂತಿಮ ಎನ್ನಬಹುದು.
ಪಿ.ಆರ್.ಶೆಟ್ಟಿ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ