ಉಡುಪಿ : ಅ 10 : ಹೊಳೆಯಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ನೀರು ಪಾಲಾಗಿದ್ದ ಘಟನೆ ಅ .19 ರಂದು ಉಡುಪಿ ಜಿಲ್ಲೆಯ ಬ್ರಹ್ಮಾವರ ಹೆರಂಜೆ ಬಳಿಯ ಮಡಿಸಾಲು ಎಂಬಲ್ಲಿ ನಡೆದಿದ್ದು ಇಂದು ಅವರ ಮೃತ ದೇಹ ದೊರೆತಿದೆ.
ಬ್ರಹ್ಮಾವರದ ಆನಸ್ (16) ಹಾಗೂ ಚಾಂತಾರಿನ ಶ್ರೇಯಸ್ (18) ಮೃತರು. ಮಂಗಳವಾರ ಮಧ್ಯಾಹ್ನ ಸ್ನೇಹಿತ ಸಂಜಯರಾಜ್ ಜತೆ ಇವರು ಹೊಳೆಯಲ್ಲಿ ಈಜಲು ಹೋಗಿದ್ದರು. ಈ ವೇಳೆ ಶ್ರೇಯಸ್ ಹಾಗೂ ಆನಸ್ ನೀರಿನಲ್ಲಿ ಮುಳುಗಿದ್ದರು. ಆದರೇ ಈ ವಿಚಾರವನ್ನು ಮೃತ ವಿದ್ಯಾರ್ಥಿಗಳ ಮನೆಯವರಿಗೆ ತಿಳಿಸದೇ ಜತೆಗಾರ ಸಂಜಯ್ ಭಯದಿಂದ ಮುಚ್ಚಿಟ್ಟಿದ್ದ ಎನ್ನಲಾಗಿದೆ.
ನಿನ್ನರ ರಾತ್ರಿಯಾದರೂ ಮಕ್ಕಳು ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ಬ್ರಹ್ಮಾವರ ಠಾಣೆಗೆ ದೂರು ನೀಡಿದ್ದರು.

ತನಿಖೆ ಆರಂಭಿಸಿದ ಪೊಲೀಸರಿಗೆ ನದಿಯ ದಡದಲ್ಲಿ ಶ್ರೇಯಸ್ ಮತ್ತು ಆನಸ್‌ನ ಬ್ಯಾಗ್ ಸಿಕ್ಕಿತ್ತು. ಈ ಸಂಬಂಧ ಸ್ನೇಹಿತ ಸಂಜಯರಾಜ್‌ನನ್ನು ವಿಚಾರಿಸಿದಾಗ ನದಿಯಲ್ಲಿ ಮುಳುಗಿರುವ ವಿಚಾರ ಬೆಳಕಿಗೆ ಬಂತು.
ಬಳಿಕ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ನದಿಯಲ್ಲಿ ಶೋಧ ನಡೆಸಿದಾಗ ಬುಧವಾರ ಮೃತದೇಹಗಳು ಸಿಕ್ಕಿವೆ.
