ಪುತ್ತೂರು, ಅ.19: ಪುತ್ತೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಗಾರೆ ಕೆಲಸ ನಿರ್ವಹಿಸಲು ಬಂದಿರುವ ವ್ಯಕ್ತಿ ಕಾಣೆಯಾಗಿದ್ದಾನೆ ಎಂದು ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುಮಾರು ಎಂಟು ವರ್ಷಗಳಿಂದ ಪುತ್ತೂರು ಸುತ್ತಮುತ್ತ ಗಾರೆ ಕೆಲಸ ಮಾಡಿಕೊಂಡಿರುವ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿ ಜತೆ ಮೂರು ವರ್ಷಗಳ ಪುತ್ತೂರಿಗೆ ಗಾರೆ ಕೆಲಸಕ್ಕಾಗಿ ಬಂದಿರುವ 21 ವರ್ಷ ಪ್ರಾಯದ ಅಬುತಾಹಿರ್ (S/O ಶಮೀರುಲ್ ಎ. ಕೆ) ಕಳೆದ 20 ದಿನಗಳಿಂದ ಪುತ್ತೂರು ತಾಲೂಕಿನ ನರಿಮೊಗರು ಎಂಬಲ್ಲಿ ಗಾರೆ ಕೆಲಸ ಮಾಡುತ್ತಿದ್ದವನು ಆಕ್ಟೊಬರ್.15 ರಂದು ಬೆಳಿಗ್ಗೆಯಿಂದ ಕಾಣೆಯಾಗಿದ್ದು, ಆತನನ್ನು ಹುಡುಕಿಕೊಂಡುವಂತೆ ಆತನ ಸೋದರ ಸಂಬಂಧಿ ಸುಚಂದ್. ಎಸ್.ಕೆ ಎಂಬವರು ಪುತ್ತೂರು ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಹೆಸರು : ಅಬುತಾಹಿರ್
ವಯಸ್ಸು : 21
ಕೂದಲು : ಕಪ್ಪು
ಮೈ ಬಣ್ಣ : ಎಣ್ಣೆ ಕಪ್ಪು
ಎತ್ತರ : 5 ಅಡಿ
ಮೈ ಕಟ್ಟು : ಸಾಧಾರಣ
ಧರಿಸಿದ್ದ ಉಡುಪು: ನೀಲಿ ಬಣ್ಣದ ಟೀ ಶರ್ಟ್, ಬಿಳಿ ಹಾಗೂ ನೀಲಿ ಬಣ್ಣದ ಚೌಕುಳಿ ಗೆರೆಗಳಿರುವ ಲುಂಗಿ
ಮಾತಾಡುವ ಭಾಷೆ : ಬಂಗಾಳಿ, ಹಿಂದಿ
ಕಾಣೆಯಾಗಿರುವ ವ್ಯಕ್ತಿ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಪುತ್ತೂರು ನಗರ ಠಾಣೆಗೆ ತಿಳಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
ಸಂಪರ್ಕ:-
ಪುತ್ತೂರು ನಗರ ಠಾಣೆ: 08251230555, 8251230500.
Email:sdpoptrmaq@karpolice.in
DPO: 8242220500, Email.domaq@@ksip.go.in