ಉಪ್ಪಿನಂಗಡಿ: ಮೀನು ಸಾಗಟದ ಮಿನಿ ಲಾರಿಯೊಂದು(ದೋಸ್ತ್) ಆಕ್ಟಿವಾಗೆ ಡಿಕ್ಕಿಯಾಗಿ, ಸವಾರನ ತಲೆಯ ಮೇಲೆ ಲಾರಿ ಸಂಚರಿಸಿ ಸವಾರ ಸ್ಥಳದಲ್ಲೇ ದಾರುಣ ಮೃತಪಟ್ಟ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿ ಗೋಳಿತೊಟ್ಟು ಸಮೀಪ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಮಂಗಳೂರು ಸಮೀಪದ ಕುಂಟಲ್ಪಾಡಿ ಪದವು ನಿವಾಸಿ ಸಚಿನ್(29) ಎಂದು ತಿಳಿದು ಬಂದಿದೆ.
ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸವಾರನ ತಲೆಯ ಮೇಲೆ ಮೀನು ತುಂಬಿಸಿಕೊಂಡು ಹೊರಟಿದ್ದ ಲಾರಿ ಹರಿದಿದ್ದು, ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಡಿಕ್ಕಿಯಾದ ಮೀನು ಸಾಗಟದ ಮಿನಿ ಲಾರಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ತೊರೆಗೆ ಬಿದ್ದಿದೆ.
ಆಕ್ಟಿವ ಸಹಸವಾರನಿಗೆ ಗಂಭೀರ ಗಾಯಗೊಂಡಿದ್ದು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ.