ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಟೈಲರ್ಸ್ ಅಸೋಸಿಯೇಶನ್‌ನ ಜಿಲ್ಲಾಧ್ಯಕ್ಷರಾಗಿ ಪುತ್ತೂರಿನ ಜಯಂತ್ ಉರ್ಲಾಂಡಿ ಆಯ್ಕೆಯಾಗಿದ್ದಾರೆ.
ಅ.17ರಂದು ಮಂಗಳೂರಿನ ಗೋರಿಗುಡ್ಡೆ ಟೈಲರ್ಸ್ ಭವನದಲ್ಲಿ ಪ್ರಜ್ವಲ್ ಕುಮಾರ್‌ರವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಪ್ರಧಾನ ಕಾರ್ಯದರ್ಶಿಯಾಗಿ ಲಿಗೋಧರ್ ಸುಳ್ಯ, ಕೋಶಾಧಿಕಾರಿಯಾಗಿ ಈಶ್ವರ್ ಸಾಲ್ಯಾನ್ ಬಂಟ್ವಾಳ, ಉಪಾಧ್ಯಕ್ಷರಾಗಿ ಕೇಶವ ಕದ್ರಿ, ಚಕ್ರೇಶ್ ಅಮೀನ್ ಸುರತ್ಕಲ್, ಸುಜಾತಾ ಭಂಡಾರಿ ಉಳ್ಳಾಲ, ಜೊತೆ ಕಾರ್ಯದರ್ಶಿಯಾಗಿ ಕುಶಾಲಪ್ಪ ಗೌಡ ಬೆಳ್ತಂಗಡಿ, ಸದಾನಂದ ಪೂಜಾರಿ ಮೂಲ್ಕಿರವರನ್ನು ಆಯ್ಕೆ ಮಾಡಲಾಯಿತು.
ಜಯಂತ್ ಉರ್ಲಾಂಡಿಯವರು ಪುತ್ತೂರು ಮುಖ್ಯರಸ್ತೆಯಲ್ಲಿರುವ ಕಿರಣ್ ಟೈಲರ್ಸ್ ಶಾಪ್ ನ ಮಾಲಕ ಹಾಗೂ ಶ್ರೀ ಶಾರದಾ ಭಜನಾ ಮಂದಿರ ಪುತ್ತೂರು ಇದರ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ