ಪುತ್ತೂರು : ಪೆಟ್ರೋಲ್ – ಡೀಸೆಲ್ ಬೆಲೆ ಭಾನುವಾರ ಮತ್ತೆ ಏರಿಕೆ ಕಂಡಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ 36 ಪೈಸೆ ಏರಿಕೆಯಾಗಿದ್ದು 109.16 ರೂ ಗೆ ಮಾರಾಟ ಮಾಡಲಾಗುತ್ತಿದೆ. ಡೀಸೆಲ್ ಬೆಲೆಯಲ್ಲಿ 37 ಪೈಸೆ ಏರಿಕೆಯಾಗಿದ್ದು 100 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಈ ಮೂಲಕ ರಾಜ್ಯ ರಾಜಧಾನಿಯಲ್ಲಿ ಡೀಸೆಲ್ 100ರ ಗಡಿ ದಾಟಿದಂತಾಗಿದೆ.
ದೇಶದ ಹಲವು ಭಾಗಗಳಲ್ಲಿ ಪೆಟ್ರೋಲ್ ದರವು ಈಗಾಗಲೇ ಲೀಟರಿಗೆ ರೂ.110ರ ಸಮೀಪದಲ್ಲಿದೆ . ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಮಹಾರಾಷ್ಟ್ರ, ಛತ್ತೀಸಗಢ, ಬಿಹಾರ, ಕೇರಳ ಮತ್ತು ಲಡಾಖ್ ನಲ್ಲಿ ಸಹ ಡೀಸೆಲ್ ದರ ಲೀಟರಿಗೆ 100 ರೂ.ಗಡಿ ದಾಟಿದೆ.
ದಕ್ಷಿಣ ಕನ್ನಡದಲ್ಲಿ ಅಕ್ಟೋಬರ್ 18ರಂದು ಡಿಸೇಲ್ ದರ ರೂ 100.03 ಪೈಸೆ ಆಗಿದೆ.
ಕೇವಲ 5 ವರ್ಷದಲ್ಲಿ ದುಪ್ಪಟ್ಟದ ಡಿಸೇಲ್ ದರ: 2015 ರಲ್ಲಿ 46.87 ರೂ ಇದ್ದ ಡಿಸೇಲ್ ದರ 2021ರಲ್ಲಿ 100 ದಾಟಿದೆ. ಬೆಲೆ ಪೂರ್ತಿ ದುಪ್ಪಟ್ಟಗಿದೆ.
2014ರ ಎಪ್ರಿಲ್ ತಿಂಗಳಲ್ಲಿ ಕಚ್ಚಾತೈಲದ ದರ 105 ಡಾಲರ್ ತಲುಪಿದಾಗ 55 ರೂ ಡಿಸೇಲ್ ದರ ಏರಿತ್ತು. ನಂತರ ಬಾರಿ ಇಳಿಕೆ ಕಂಡ ಕಚ್ಚಾತೈಲದ ದರ ಇದೀಗ 2015ರಲ್ಲಿ 55 ಕ್ಕೆ ಇಳಿಯಿತು, ಆಗ 47ರೂ ಸನಿಹದಲ್ಲಿ ಡಿಸೇಲ್ ದರವಿತ್ತು. 2020 ರ ಎಪ್ರಿಲ್ ತಿಂಗಳಲ್ಲಿ ಕಚ್ಚಾತೈಲದ ದರ 21 ಡಾಲರ್ ಗೆ ಇಳಿಯಿತು. ಆಗಲೂ ಡಿಸೇಲ್ ಬೆಲೆ 80ರೂ ಇತ್ತು. ಕಚ್ಚಾತೈಲದ ದರ ಅಷ್ಟು ಪ್ರಮಾಣದಲ್ಲಿ ಇಳಿಕೆ ಕಂಡರೂ ಬೆಲೆಏರಿಕೆ ಆಗುತ್ತದೆ ಇತ್ತು. ಆದರೆ ಕೊವಿಡ್ ಲಾಕ್ ಡೌನ್ ನೆಪ ಒಡ್ಡಿದ ಕೇಂದ್ರ ಸರ್ಕಾರ ಲಾಕ್ ಡೌನ್ ಸಡಿಲಿಕೆ ಆಗುವಾಗ ಇಳಿಕೆಯಾಗಲಿದೆ ಎಂದು ಹೇಳಿತ್ತು.
ಇದೀಗ ಕಚ್ಚಾತೈಲದ ದರ ಬ್ಯಾರಲ್ ಗೆ 78 ಡಾಲರ್ ತಲುಪಿದಾಗ ಬರೋಬ್ಬರಿ 100ರೂ ಗೆ ತಲುಪಿದೆ.
3 ರೂ ಯಿಂದ 31 ಕ್ಕೆ ಏರಿದ ಡಿಸೇಲ್ ಮೇಲಿನ ಸುಂಕ :
2014ರಲ್ಲಿ ಡಿಸೇಲ್ ಮೇಲೆ ಆಗಿನ ಕಾಂಗ್ರೇಸ್ ಸರ್ಕಾರ 3 ರೂ 56 ಪೈಸೆ ಅಬಕಾರಿ ಸುಂಕ ವಿಧಿಸುತಿತ್ತು. 9ರೂ 48 ಪೈಸೆ ಪೆಟ್ರೋಲ್ ಮೇಲೆ ಸುಂಕ ವಿಧಿಸಿತ್ತು. 2020ರಲ್ಲಿ ಮೋದಿ ಸರ್ಕಾರ 31 ರೂ 80 ಪೈಸೆ ಡಿಸೇಲ್ ಗೆ ಅಬಕಾರಿ ಸುಂಕ ಹೆಚ್ಚಿಸಿದೆ. 6 ವರ್ಷದಲ್ಲಿ ಅಬಕಾರಿ ಸುಂಕ 10 ಪಟ್ಟು ಜಾಸ್ತಿಯಾಗಿದೆ. 2020ರಲ್ಲಿ ಪೆಟ್ರೋಲ್ ಮೇಲೆ 32.98 ರೂ ಅಬಕಾರಿ ಸುಂಕ ವಿಧಿಸುವ ಮೂಲಕ ಜನತೆಗೆ ಸುಂಕ ಬರೆ ಎಳೆದಿದೆ.
ಕಚ್ಚಾತೈಲದ ದರ ಇಳಿಕೆ ಕಂಡರೂ ತೈಲ ದರ ಏರಿಕೆಯತ್ತಲೇ ಸಾಗಿದೆ. ಕೇಂದ್ರ ಸರ್ಕಾರ ಅಬಕಾರಿ ಸುಂಕ ವಿಪರೀತ ಏರಿಸುತ್ತಾ ಸಾಗಿಸುತ್ತಿದೆ.
ಡಿಸೇಲ್ ದರ ಏರಿಕೆ ಕಂಡರೆ ಎಲ್ಲಾ ವಸ್ತುಗಳ ದರವೂ ಏರಿಕೆಯಾಗುತ್ತಲೇ ಇರುವುದರಿಂದ ಜನತೆ ಬೆಲೆಏರಿಕೆಯಿಂದ ಸಂಕಷ್ಟ ಅನುಭವಿಸುವಂತಾಗಿದೆ.