ಪುತ್ತೂರು: ಪುತ್ತೂರಿನಲ್ಲೊಂದು ವಿಚಿತ್ರ ಅತ್ಯಾಚಾರ ಪ್ರಕರಣವೊಂದು ವರದಿಯಾಗಿದೆ. ವೃದ್ದನೊಬ್ಬ 20 ರ ಹರೆಯದ ಎಂಡೋಪೀಡಿತ ಯುವಕನನ್ನು ಬಲವಂತವಾಗಿ ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದಾನೆಂದು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕಬಕ ಗ್ರಾಮದ ಮುರ ರೈಲ್ವೇ ಕ್ರಾಸ್ ಬಳಿ ಶುಕ್ರವಾರ ಸಂಜೆ 6.00 ಗಂಟೆ ಸುಮಾರಿಗೆ ಕೃತ್ಯ ನಡೆದಿದ್ದು ಸ್ಥಳೀಯ ನಿವಾಸಿ ಮಹಮ್ಮದ್ ಹನೀಫ್ (67) ಎಂಬಾತ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ. ಆರೋಪಿಯು ಯುವಕನಿಗೆ ಕಬ್ಬು ನೀಡುವ ನೆಪದಲ್ಲಿ ಮುರ ರೈಲ್ವೇ ಕ್ರಾಸ್ ಹತ್ತಿರ ಕರೆದುಕೊಂಡು ಹೋಗಿ ಈ ಕೃತ್ಯ ಎಸಗಿದ್ದಾನೆ. ಈ ವಿಚಾರವನ್ನು ಮನೆಯವರಿಗೆ ತಿಳಿಸಿದರೆ ಹತ್ಯೆ ಮಾಡುವ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದೆ
ಸಂತ್ರಸ್ತ ಎಂಡೋಪೀಡಿತ ಯುವಕನು ವಾಕಿಂಗ್ ಗೆಂದು ಮನೆಯಿಂದ ಹೋಗಿದ್ದು ವಾಪಸ್ಸು ಮನೆಗೆ ಮರಳಿದ ಸಂದರ್ಭ ಆತನ ವಸ್ತ್ರ ಮಣ್ಣಾಗಿರುವುದನ್ನು ಮನೆ ಮಂದಿ ಗಮನಿಸಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ಯುವಕ ಅತ್ಯಾಚಾರದ ಯತ್ನ ನಡೆದ ಬಗ್ಗೆ ಬಾಯ್ಬಿಟ್ಟಿದ್ದಾನೆ. ಈ ಬಗ್ಗೆ ಯುವಕನ ತಂದೆ ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಘಟನೆ ಸಂಬಂಧ ಆರೋಪಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ನೊಂದ ಯುವಕ ಹಾಗೂ ಆರೋಪಿ ಭಿನ್ನ ಭಿನ್ನ ಕೋಮಿಗೆ ಸೇರಿದವರು ಎಂದು ಹೇಳಲಾಗುತ್ತಿದೆ