ನವದೆಹಲಿ, ಅ.16 : ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಡೆಂಗ್ಯೂ ಜ್ವರ ಇರುವುದು ಪತ್ತೆಯಾಗಿರುವುದಾಗಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಮನಮೋಹನ್ ಸಿಂಗ್ ಅವರಿಗೆ ಬುಧವಾರ ಸಂಜೆ ಜ್ವರದ ಕಾರಣ ಏಮ್ಸ್ ಗೆ ದಾಖಲಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಏಮ್ಸ್ ಅಧಿಕಾರಿ, “ಮನಮೋಹನ್ ಸಿಂಗ್ ಅವರ ಆರೋಗ್ಯ ಸ್ಥಿತಿ ಕ್ರಮೇಣ ಸುಧಾರಿಸುತ್ತಿದ್ದು, ಅವರ ಪ್ಲೇಟ್‌ಲೆಟ್‌ಗಳು ಹೆಚ್ಚುತ್ತಿವೆ ಮತ್ತು ಈಗ ಅಪಾಯದಿಂದ ಹೊರಬಂದಿದ್ದಾರೆ” ಎಂದರು.
ಇನ್ನು ಕೊರೊನಾದ ಎರಡನೇ ಅಲೆಯ ಸಮಯದಲ್ಲಿ, ಸಿಂಗ್ ಅವರಿಗೆ ಸೋಂಕು ದೃಢಪಟ್ಟು ಏಮ್ಸ್‌ಗೆ ದಾಖಲಾಗಿದ್ದರು. ಕಳೆದ ವರ್ಷ ಮೇ ತಿಂಗಳಲ್ಲಿ ಎದೆ ನೋವಿನಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಮನಮೋಹನ್ ಸಿಂಗ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಿಧನರಾಗಿದ್ದಾರೆ ಎಂದು ಪ್ರಚಾರ ಆಗುತ್ತಿರುವ ವರದಿ ಸತ್ಯಕ್ಕೆ ದೂರವಾಗಿದ್ದು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.