ನವದೆಹಲಿ, ಅ.16: ಇಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಪ್ರತಿ ಲೀಟರ್‌ಗೆ 35 ಪೈಸೆ ಏರಿಸಲಾಗಿದ್ದು, ದೇಶದಲ್ಲಿ ಇಂಧನ ದರ ಗರಿಷ್ಠ ಮಟ್ಟಕ್ಕೆ ತಲುಪಿದೆ. ದೇಶದಲ್ಲಿ ತೈಲ ಬೆಲೆ 12 ದಿನದಲ್ಲಿ 10ನೇ ಬಾರಿ ಏರಿಕೆ ಕಂಡಿದೆ.
ಪುತ್ತೂರಿನ ಪೇಟೆಯಲ್ಲಿ ಡಿಸೇಲ್ ಬೆಲೆ 100 ರೂ ಗೆ ಕೇವಲ 2 ಪೈಸೆ ಬಾಕಿ ಇದ್ದು, ಗ್ರಾಮೀಣ ಭಾಗದಲ್ಲಿ ಡಿಸೇಲ್ ಬೆಲೆ 100ರೂ ದಾಟಿದೆ.
ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 105.49 ರೂ., ಡೀಸೆಲ್ ದರದಲ್ಲಿಯೂ 35 ಪೈಸೆ ಹೆಚ್ಚಳವಾಗಿದ್ದು, ಪ್ರತಿ ಲೀಟರ್ ಡೀಸೆಲ್ ಬೆಲೆ 93.22 ರೂ. ಗೆ ಏರಿಕೆಯಾಗಿದೆ. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 111.43 ರೂ. ಹಾಗೂ ಲೀಟರ್ ಡೀಸೆಲ್ ದರ 102.15 ರೂ. ನಿಗದಿಯಾಗಿದೆ.
ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 106.11 ರೂ. ಹಾಗೂ ಲೀಟರ್ ಡೀಸೆಲ್ ದರ 97.33 ರೂ. ಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 102.70 ರೂ. ಹಾಗೂ ಲೀಟರ್ ಡೀಸೆಲ್ ದರ 98.59 ರೂ. ಇದೆ.
ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 109.16 ರೂ., ಡೀಸೆಲ್ ದರ 100 ರೂ., ಹೈದರಾಬಾದ್‌ನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 109.73 ರೂ., ಡೀಸೆಲ್ ಲೀಟರ್ ಬೆಲೆ 102.80 ರೂ. ನಿಗದಿಯಾಗಿದೆ.
ಸತತ ಮೂರನೇ ದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿದ್ದು, ಇಂದು ಪ್ರತಿ ಲೀಟರ್‌ಗೆ 35 ಪೈಸೆ ಏರಿಕೆಯಾಗಿದೆ. ಸೆಪ್ಟೆಂಬರ್ ಕೊನೆಯ ವಾರದಲ್ಲಿ ಮೂರು ವಾರಗಳ ದರ ಪರಿಷ್ಕರಣೆ ಅವಧಿ ಮುಗಿದ ನಂತರ ಇಂದಿಗೆ ಪೆಟ್ರೋಲ್ ಬೆಲೆಯಲ್ಲಿ 15 ಬಾರಿ ಹೆಚ್ಚಳ ಹಾಗೂ ಡೀಸೆಲ್ ಬೆಲೆಯಲ್ಲಿ 18 ಬಾರಿ ಹೆಚ್ಚಳವಾಗಿದೆ.
ದಕ್ಷಿಣ ಕನ್ನಡದಲ್ಲೂ ಪೆಟ್ರೋಲ್ ದರ ರೂ. 110 ಸಮೀಪದಲ್ಲಿದೆ. ಡಿಸೇಲ್ ಬೆಲೆಯೂ 100ರ ಹತ್ತಿರವಿದ್ದು ಕೆಲವು ಕಡೆ ಶತಕ ದಾಟಿದೆ