ಪುತ್ತೂರು: ಮಂಗಳೂರು ಬಜಪೆ ಮುರ ಜಂಕ್ಷನ್‌ನಲ್ಲಿ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ ಪ್ರಕರಣದ ಆರೋಪಿಯನ್ನು ಮಂಗಳೂರು 6ನೇ ಹೆಚ್ಚುವರಿ ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ. 2 ವರ್ಷಗಳ ಹಿಂದೆ ಪ್ರಕರಣ ದಾಖಲಾಗಿತ್ತು
ಮ೦ಗಳೂರು ಕುಲಶೇಖರದ ಅಜಿತ್ ಕುಮಾರ್ ಅಳ್ವ ದೋಷಮುಕ್ತಗೊಂಡವರು. 2019ರ ಸೆ.9ರಂದು ಬಜಪೆ ಮುರ ಜಂಕ್ಷನ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಉಪನಿರೀಕ್ಷಕ ಮತ್ತು ಪೇದೆಯ ಮೇಲೆ ಹಲ್ಲೆ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪವನ್ನು ಇವರು ಎದುರಿಸುತ್ತಿದ್ದರು.
ಮಂಗಳೂರಿನ ತಾರಿಕಂಬ್ಳ ಎಂಬಲ್ಲಿ ಪ್ರಕರಣದ ಆರೋಪಿ ಅಜೀತ್ ಪೊಲೀಸ್ ಉಪನಿರೀಕ್ಷಕ ಮತ್ತು ಪೇದೆಯವರಿಗೆ ಅವಾಚ್ಯ ಶಬ್ದಗಳಿಂದ ಬೈದು ಕಬ್ಬಿಣ್ಣದ ಪಂಚ್ ನಿಂದ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಐಪಿಸಿ ಕಲಂ 353, 504, 322 ರಂತೆ ಪ್ರಕರಣ ದಾಖಲಾಗಿತ್ತು
ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 6ನೇ ಹೆಚ್ಚುವರಿ ನ್ಯಾಯಿಕ ದ೦ಡಾಧಿಕಾರಿಯವರ ನ್ಯಾಯಾಲಯವೂ ಅಜೀತ್ ಅವರನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
ಆರೋಪಿ ಪರ ವಕೀಲರಾದ ಹರೀಶ್ ಕುಮಾರ್ ಬಳಕ್ಕ, ದೀಪಕ್ ಬೊಳುವಾರು, ಬಬಿತಾ ಬಂಗೇರ ವಾದಿಸಿದ್ದರು.