ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಪ್ರಸಿದ್ಧ ದೇವರಗುಡ್ಡ ಕ್ಷೇತ್ರದ ಗೊರವಯ್ಯ ನವರಾತ್ರಿಯ ಅಯುಧ ಪೂಜೆ ಸಂದರ್ಭ ನುಡಿಯುವ ಭವಿಷ್ಯ ಸುಳ್ಳಾಗುವುದಿಲ್ಲ ಎಂಬ ಪ್ರತಿತಿಯಿದೆ . ವರ್ಷದ ಭವಿಷ್ಯ ವಾಣಿ ಎಂದೆ ಖ್ಯಾತಿ ಪಡೆದಿರುವ ಕಾರ್ಣಿಕ ನುಡಿಯನ್ನು ಗೊರವಯ್ಯ ನಾಗಪ್ಪಜ್ಜ ಬಿಲ್ಲನ್ನೇರಿ ಇಂದು ನುಡಿದಿದ್ದಾರೆ.
“ಎರಿ ದೊರೆ ಆಕತಲೆ ದೈವ ದರ್ಬಾರ್ ಆಕತಲೆ ಪರಾಕ್” ಎಂಬ ಭವಿಷ್ಯ ನುಡಿಯನ್ನು ದೇವರಗುಡ್ಡ ಕ್ಷೇತ್ರದ ಮಾಲತೇಶ ಸ್ವಾಮೀಜಿ ನುಡಿದಿದ್ದು ಇದೀಗ ಈ ಒಗಟಿನ ಒಳಹು ಬಿಡಿಸುವ ಕಾಯಕ ನಡೆಯುತ್ತಿದೆ. ದೇವಸ್ಥಾನದ ಪ್ರಧಾನ ಅರ್ಚಕರಾದ ಸಂತೋಷ ಭಟ್ ಗೂರೂಜಿ ಭವಿಷ್ಯವಾಣಿಯನ್ನು ವಿಶ್ಲೇಷಣೆ ಮಾಡಿದ್ದು ಅವರ ಪ್ರಕಾರ ಎರೆ ಎಂದರೆ ಮಣ್ಣು. ದೊರೆ ಎಂದರೆ ರಾಜ. ಹೀಗಾಗಿ ಇದು ರೈತರ ಮೇಲೆ ಪ್ರಭಾವ ಬೀರುವ ಭವಿಷ್ಯವಾಣಿ ಆಗಿದೆ.
ರೈತ ಬೆಳೆದ ಬೆಳೆ ದೊರೆಯಾಗುತ್ತದೆ. ಸಮೃದ್ಧಿಯಾಗಿ ಫಲವನ್ನು ನೀಡುತ್ತದೆ ಎಂದು ವಿಶ್ಲೇಷಣೆ ಮಾಡಬಹುದು. ದೈವ ದೊರೆಯಾದಿತಲೆ ಎಂದರೆ ದೇವರ ಆಶೀರ್ವಾದ ಅಂತಾ, ಕೊರೊನಾ ಮೂರನೇ ಅಲೆ ಬರುವುದಿಲ್ಲ ಎಂದು ಭವಿಷ್ಯವಾಣಿಯ ತಿಳಿದುಕೊಳ್ಳಬಹುದು. ರಾಜಕೀಯವಾಗಿ ಹೇಳುವುದಾದರೆ ಎರೆ ಎಂದರೆ ಕಟ್ಟಕಡೆಯದು ಎಂದು ಅರ್ಥ. ಜನತೆ ಮತ್ತು ದೈವ ಮೆಚ್ಚಿದ ಆಡಳಿತವನ್ನು ಈ ಸರ್ಕಾರ ನೀಡುತ್ತದೆ ಎಂದು ಅವರು ವಿವರಿಸಿದ್ದಾರೆ.

ಅಲ್ಲದೆ, ಪಕ್ಷೇತರರ ಸಹಕಾರದಿಂದ ರಾಜ್ಯದ ಸರಕಾರದ ಮುಂದಿನ ರಾಜಕೀಯ ಭವಿಷ್ಯ ಇರಲಿದೆ ಎಂದು ಹೇಳಿರುವುದಾಗಿಯೂ ಅವರು ವಿಶ್ಲೇಸಿಸಿದ್ದಾರೆ. ಕಳೆದ ವರ್ಷ “ವ್ಯಾದಿ ಬೂದಿಯಾದಿತಲೆ ಸೃಷ್ಟಿ ಸಿರಿ ಆಯಿತಲೆ ಪರಾಕ್” ಎಂಬುದು ಕಾರ್ಣಿಕದ ನುಡಿಯಲಾಗಿತ್ತು. ಬಹಳ ದಿನಗಳಿಂದ ಕರೊನಾ ರೋಗ ಕಡಿಮೆ ಆಗುತ್ತಿದೆ. ಮುಂದೆಯೂ ಇನ್ನೂ ಕಡಿಮೆ ಆಗುತ್ತೆ ಎಂದು ಅದರ ಒಗಟು ಬಿಡಿಸಲಾಗಿತ್ತು. ಅದರಂತೆ ಕೊರೊನಾ ರೋಗ ಈ ಬಾರಿ ಬಹುತೇಕ ಕಡಿಮೆಯಾಗಿದೆ