ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(ಏಮ್ಸ್)ಗೆ ದಾಖಲಿಸಲಾಗಿದೆ. ಇಂದು (ಅ.13) ಸಂಜೆ 6.15ಕ್ಕೆ ಅಸ್ಫತ್ರೆಗೆ ದಾಖಲಿಸಿದ್ದು, ಅಲ್ಲಿ ಕಾರ್ಡಿಯೋ-ನ್ಯೂರೋ ಟವರ್ಗೆ ಕರೆದೊಯ್ಯಲಾಗಿದ್ದು, ಕೆಲವು ವೈದ್ಯಕೀಯ ಪರೀಕ್ಷೆಗಳು ನಡೆಯುತ್ತಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೇಸ್ ಇದೊಂದು ರೂಟಿನ್ ಚೆಕಪ್ ಅತಂಕ ಪಡುವ ಕಾರಣಗಳು ಇಲ್ಲ ಎಂದು ತಿಳಿಸಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.
ವರದಿಗಳ ಪ್ರಕಾರ, ಸಿಂಗ್ ಅವರು ಕಳೆದ ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 88 ವರ್ಷದ ಮನಮೋಹನ್ ಸಿಂಗ್ ಅವರು ಕಳೆದ ಏಪ್ರಿಲ್ 19ರಂದು ಕೋವಿಡ್ ಪಾಸಿಟಿವ್ ಬಂದಿದ್ದು ಸೋಂಕಿನಿಂದ ಯಶಸ್ವಿಯಾಗಿ ಚೇತರಿಸಿಕೊಂಡು ಏಪ್ರಿಲ್ 29ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.
