ಅ 12 ರಂದು ಉಪ್ಪಿನಂಗಡಿ ಬಸ್ಸು ನಿಲ್ದಾಣದಲ್ಲಿ ನಡೆದ ಘೋರ ಅಪಘಾತದಲ್ಲಿ ಮಹಿಳೆ ಹಾಗೂ ಆಕೆಯ ಒಂದು ವರ್ಷದ ಮಗು ಮೃತಪಟ್ಟ ಧಾರುಣ ಘಟನೆ ನಡೆದಿತ್ತು. ಈ ಹೃದಯ ವಿದ್ರಾವಕ ಘಟನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಕಂಡು ಬಂದಿತ್ತು. ಈ ಅಘಾತಕಾರಿ ಘಟನೆಯ ಪೋಟೋ ಹಾಗೂ ವಿಡೀಯೋಗಳನ್ನು ವೀಕ್ಷಿಸಿದ ಜನತೆ ಮಮ್ಮಲ ಮರುಗಿದ್ದರು.
ಆದರೇ ಇದೀಗ ವ್ಯಕ್ತಿಯೊಬ್ಬ ಸಾವನ್ನು ಸಂಭ್ರಮಿಸಿದ್ದಾನೆ ಎಂದು ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ಅಫ್ ಇಂಡಿಯಾ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಅ 13 ರಂದು ದೂರು ನೀಡಿದೆ. ಎಸ್‍ಡಿಪಿಐ ಪಕ್ಷದ ಉಪ್ಪಿನಂಗಡಿ ಬ್ಲಾಕ್ ಸದಸ್ಯ ಇಕ್ಬಾಲ್ ಕೆಂಪಿ ಠಾಣೆಗೆ ದೂರು ನೀಡಿದವರು. ಚಾಲಕ ಆನಂದ ಎಂಬಾತನ ವಿರುದ್ದ ದೂರು ನೀಡಿದ್ದಾರೆ
ಉಪ್ಪಿನಂಗಡಿಯ ಬಸ್ ನಿಲ್ದಾಣದಲ್ಲಿ ಮಂಗಳವಾರ ಕೆಎಸ್ಸಾರ್ಟಿಸಿ ಬಸ್ ಹರಿದು ಸಾಹಿದಾ (25) ಹಾಗೂ ಅವರ ಒಂದು ವರ್ಷದ ಪುತ್ರ ಸಾಹಿಲ್ ಮೃತಪಟ್ಟಿದ್ದರು. ಈ ಅಪಘಾತಕ್ಕೆ ಜೀವಹಾನಿಗೆ ಇಡೀ ಊರಿಗೆ ಊರೇ ಶೋಕ ವ್ಯಕ್ತಪಡಿಸುತ್ತಿದ್ದರೆ, ಡೈವರ್ ಆನಂದ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವಿಕೃತವಾಗಿ ಕಮೆಂಟ್ ಹಾಕಿ ಈ ಘಟನೆಯನ್ನು ಸಂಭ್ರಮಿಸಿದ್ದಾನೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ನಿಯೋಗದಲ್ಲಿ ಎಸ್‍ಡಿಪಿಐ ಮುಖಂಡರಾದ ಝಕಾರಿಯಾ ಕೊಡಿಪ್ಪಾಡಿ, ಮುಸ್ತಫಾ ಲತೀಫಿ, ಅಬ್ದುಲ್ ಮಜೀದ್ ಮಠ, ಹಸೈನಾರ್ ಇದ್ದರು.