Connect with us

ಕಾರ್ಯಕ್ರಮಗಳು

ಮಂಗಳೂರು: ವಿವಾಹಿತ ಮಹಿಳೆ ನಾಪತ್ತೆ – ಪತಿಯಿಂದ ಠಾಣೆಗೆ ದೂರು

Ad Widget

ಮಂಗಳೂರು, ಅ.10: ಎರಡು ಮಕ್ಕಳ ತಾಯಿ ಮಕ್ಕಳನ್ನು ತಾವು ವಾಸವಾಗಿದ್ದ ಬಾಡಿಗೆ ಮನೆಯಲ್ಲಿ ಬಿಟ್ಟು ನಾಪತ್ತೆಯಾಗಿರುವ ಬಗ್ಗೆ  ಆಕೆಯ ಪತಿ ನಾಗೇಶ್ ಶೆರಿಗುಪ್ಪೆ ಎಂಬವರು ನೀಡಿದ ದೂರಿನಂತೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget

Ad Widget

Ad Widget

Ad Widget

ವೆಲೆನ್ಸಿಯ ನಿವಾಸಿ  ನಾಗೇಶ್ ಶೆರಿಗುಪ್ಪೆರವರ ಪತ್ನಿ  ವಿಜಯಲಕ್ಷ್ಮಿ (26) ನಾಪತ್ತೆಯಾದ  ವಿವಾಹಿತ ಮಹಿಳೆ .ದಂಪತಿಗಳು  ವೆಲೆನ್ಸಿಯಾದ ಸುವರ್ಣ ರಸ್ತೆಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಎಂಟು ವರ್ಷದಿಂದ ವಾಸಿಸುತ್ತಿದ್ದರು. ವಿಜಯಲಕ್ಷ್ಮಿಯವರು ಅದೇ ಅಪಾರ್ಟ್‌ಮೆಂಟ್‌ ನಲ್ಲಿ ವಾಚ್‌ ಮ್ಯಾನ್‌ ಆಗಿಯೂ ಕೆಲಸ ನಿರ್ವಹಿಸುತ್ತಿದ್ದರು. ನಾಗೇಶ್ ರವರು ರವಿ ಎಂಬವರ ಕಾರು ಚಾಲಕರಾಗಿ ದುಡಿಯುತ್ತಿದ್ದಾರೆ. 

Ad Widget

Ad Widget

ಅ. 10 ರಂದು ಬೆಳಿಗ್ಗೆ ಎಂದಿನಂತೆ ನಾಗೇಶ್ ತನ್ನ ಕೆಲಸಕ್ಕೆ ತೆರಳಿದ್ದರು . ಮಧ್ಯಾಹ್ನ  ನಾಗೇಶ್ʼರವರಿಗೆ  ಪೋನ್‌ ಕರೆ ಮಾಡಿದ ಅವರು  ವಾಸವಿದ್ದ ಅಪಾರ್ಟ್‌ ಮೆಂಟ್‌ನವರು, ವಿಜಯಲಕ್ಷ್ಮಿಯವರಲ್ಲಿ  ಜನರೇಟರ್ ಆನ್ ಮಾಡಲೆಂದು ತಿಳಿಸಲು ಸಂಪರ್ಕಿಸಲು ಯತ್ನಿಸುತ್ತಿದ್ದು, ಅದರೇ ಕಾಣಿಸದಿರುವ ಮಾಹಿತಿಯನ್ನು ನೀಡಿದ್ದಾರೆ

Ad Widget

Ad Widget

ಹೀಗಾಗಿ  ಅಪಾರ್ಟ್‌ಮೆಂಟ್‌ಗೆ ಬಂದ  ನಾಗೇಶ್ ಮನೆಯಲ್ಲಿ ಪತ್ನಿಗೆ  ಹುಡುಕಾಡಿದರೂ  ಪತ್ತೆಯಾಗಿಲ್ಲ. . ಮಕ್ಕಳು ಇಬ್ಬರನ್ನೂ ಬಿಟ್ಟು ಕಾಣೆಯಾಗಿರುವುದು ಕಂಡುಬಂದಿದೆ.ನಂತರ ಪತ್ನಿಯ ಫೋನ್‌ಗೆ ಕರೆ ಮಾಡಿದಾಗ ಮೊಬೈಲ್ ಫೋನ್ ಸ್ವಿಚ್‌ಆಫ್ ಎಂದು ಬಂದಿದೆ. ಸಂಬಂಧಿಕರು, ನೆರೆಹೊರೆಯ ವರಲ್ಲಿ ವಿಚಾರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಪತ್ನಿಯನ್ನು ಹುಡುಕಿ ಕೊಡಿ ಎಂದು ಗಂಡ ನಾಗೇಶ್ ಪೊಲೀಸರಿಗೆ ದೂರು ನೀಡಿದ್ದಾರೆ.

Ad Widget

Ad Widget

ಚಹರೆ: 5.1 ಅಡಿ ಎತ್ತರ, ಗೋಧಿ ಮೈ ಬಣ್ಣ, ಸಾಧಾರಣ ಶರೀರ, ಕಪ್ಪು ಬಣ್ಣದ ಚೂಡಿದಾರದ ಪ್ಯಾಂಟ್, ನೀಲಿ ಹಾಗೂ ಹಳದಿ ಬಣ್ಣದ ಹೂಗಳಿರುವ ಚೂಡಿದಾರದ ಟಾಪ್ ಧರಿಸಿದ್ದರು. ನಾಪತ್ತೆಯಾದ ವಿವಾಹಿತ ಯುವತಿಯ ಚಹರೆ ಹೊಂದಿರುವವರು ಕಂಡು ಬಂದಲ್ಲಿ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಗೆ (0824- 2220518, 9448221401) ಮಾಹಿತಿ ನೀಡಲು ಪ್ರಕಟನೆ ತಿಳಿಸಿದೆ.

Click to comment

Leave a Reply

ಮಂಗಳೂರು

Dharmasthala-ಧರ್ಮಸ್ಥಳದಲ್ಲಿ ಈ 12 ದಿನ ಮುಂಜಾನೆ ದರ್ಶನ ರದ್ದು – ಕಾರಣ ಇಲ್ಲಿದೆ

Ad Widget

ಮಂಗಳೂರು, ಏ. 04: ಶ್ರೀ ಕ್ಷೇತ್ರ ಧರ್ಮಸ್ಥಳದ 2024ರ ಕಾಲಾವಧಿ ಜಾತ್ರೆಯು ಏ. 12 ಶುಕ್ರವಾರದಿಂದ ಏ. 24 ಬುಧವಾರದವರೆಗೆ ಅದ್ಧೂರಿಯಾಗಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಈಗಾಗಲೇ ಸಕಲ ಸಿದ್ಧತೆ ನಡೆಯುತ್ತಿದ್ದು, ರಾಜ್ಯದ ಮೂಲೆ ಮೂಲೆಯಿಂದ ಆಗಮಿಸುವ ಲಕ್ಷಾಂತರ ಭಕ್ತರು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಜಾತ್ರೆಯ ಸೊಬಗನ್ನು ಕಣ್ತುಂಬಿಕೊಳ್ಳಲಿದ್ದಾರೆ.

Ad Widget

Ad Widget

Ad Widget

Ad Widget

2024ರ ಕಾಲಾವಧಿ ಜಾತ್ರೆಯ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಆಡಳಿತ ಮಂಡಳಿ ಧಾರ್ಮಿಕ ಕಾರ್ಯಕ್ರಮಗಳ ವಿವರ ಸೇರಿದಂತೆ ಇತರ ಮಾಹಿತಿಯೊಳಗೊಂಡ ಪ್ರಕಟಣೆ ಹೊರಡಿಸಿದ್ದು, ಭಕ್ತರಿಗಾಗಿ ಕೆಲವು ಮುಖ್ಯವಾದ ಮಾಹಿತಿಯನ್ನು ನೀಡಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಕಾಲಾವಧಿ ಜಾತ್ರೆಯ ಸಮಯದಲ್ಲಿ ಕ್ಷೇತ್ರಕ್ಕೆ ತೆರಳುವವರು ಈ ವಿಚಾರವನ್ನು ತಿಳಿದಿರಬೇಕಾಗಿದೆ.

Ad Widget

Ad Widget

ಏ 18ರಿಂದ ಏ 23ರವರೆಗೆ ಬೆಳಗ್ಗೆ 8:30ರವರೆಗೆ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಸಾಯಂಕಾಲ 5 ಗಂಟೆಯಿಂದ 8:30ರವರೆಗೆ ಮಾತ್ರ ಭಕ್ತರನ್ನು ಗರ್ಭಗುಡಿಯ ಆವರಣಕ್ಕೆ ಬಿಡಲಾಗುವುದು ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. ಹೀಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಏ 18ರಿಂದ ಏ 23ರವರೆಗೆ ಮುಂಜಾನೆಯ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ.

Ad Widget

Ad Widget

ಧಾರ್ಮಿಕ ಕಾರ್ಯಕ್ರಮಗಳ ವಿವರ ಈ ಕೆಳಗಿನಂತಿದೆ
ಏಪ್ರಿಲ್‌ 12- ರಾತ್ರಿ 8:30ರಿಂದ ಓಲೆ ಬರೆಯುವುದು
ಏಪ್ರಿಲ್‌ 13- ಸಂಜೆ 6 ಗಂಟೆಗೆ ಪಯ್ಯೋಳಿ ಹೋಗುವುದು, ರಾತ್ರಿ 7:30ಕ್ಕೆ ಧ್ವಜಾರೋಹಣ, ರಾತ್ರಿ 10 ಗಂಟೆಗೆ ಧರ್ಮ ದೈವಗಳ ಭಂಡಾರ ಹೊರಡುವುದು.
ಏಪ್ರಿಲ್‌ 14- ರಾತ್ರಿ 10 ಗಂಟೆಯ ನಂತರ ಧರ್ಮ ದೈವಗಳ ನೇಮ
ಏಪ್ರಿಲ್‌ 15- ರಾತ್ರಿ 8 ಗಂಟೆಯಿಂದ ಅಣ್ಣಪ್ಪ ನೇಮ
ಏಪ್ರಿಲ್‌ 16- ಉತ್ಸವ
ಏಪ್ರಿಲ್‌ 17- ರಾತ್ರಿ 8:30ಕ್ಕೆ ಬಯಗಿನ ಬಲಿ ಹೊರಡುವುದು, ಹೊಸಕಟ್ಟೆ ಉತ್ಸವ, ರಜತಲಾಲಕಿಯಲ್ಲಿ ಹೊಸಕಟ್ಟೆಗೆ(ವಸಂತ ಮಹಲ್‌)
ಏಪ್ರಿಲ್‌ 18- ಬೆಳಗ್ಗೆ ರಥೋತ್ಸವ, ರಾತ್ರಿ 8:30 ಗಂಟೆಯ ನಂತರ ಉತ್ಸವ ಪ್ರಾರಂಭ,
ಏಪ್ರಿಲ್‌ 19- ಬೆಳಗ್ಗೆ ರಥೋತ್ಸವ ರಾತ್ರಿ 8:30 ಗಂಟೆಯ ನಂತರ ಉತ್ಸವ ಪ್ರಾರಂಭ, ಲಲಿತೋದ್ಯಾನ ಉತ್ಸವ
ಏಪ್ರಿಲ್‌ 20-ಬೆಳಗ್ಗೆ ರಥೋತ್ಸವ ರಾತ್ರಿ 8:30 ಗಂಟೆಯ ನಂತರ ಉತ್ಸವ ಪ್ರಾರಂಭ, ಕೆರೆಕಟ್ಟೆ ಉತ್ಸವ
ಏಪ್ರಿಲ್‌ 21-ಬೆಳಗ್ಗೆ ರಥೋತ್ಸವ ರಾತ್ರಿ 8:30 ಗಂಟೆಯ ನಂತರ ಉತ್ಸವ ಪ್ರಾರಂಭ, ಚಂದ್ರಮಂಡಲ ಗೌರಿ ಮಾರುಕಟ್ಟೆ ಉತ್ಸವ
ಏಪ್ರಿಲ್ 22- ಬೆಳಗ್ಗೆ ರಥೋತ್ಸವ, ದರ್ಶನ ಬಲಿ, ಬೆಳಗ್ಗೆ 9 ಗಂಟೆ ನಂತರ ದೇವರ ದರ್ಶನ, ರಾತ್ರಿ 8:30 ಗಂಟೆಯ ನಂತರ ಉತ್ಸವ ಪ್ರಾರಂಭ, ಬ್ರಹ್ಮರಥೋತ್ಸವ, ಭೂತ ಬಲಿ
ಏಪ್ರಿಲ್ 23: ಬೆಳಗ್ಗೆ 9 ಗಂಟೆಗೆ ಕವಾಟೋಧ್ಘಾಟನೆ, ರಾತ್ರಿ 6 ಆರು ಗಂಟೆ ನಂತರ ದರ್ಶನ ಬಲಿ, ಧ್ವಜ ಅವಾರೋಹಣ
ಏಪ್ರಿಲ್ 24: ರಾತ್ರಿ 8:30ರಿಂದ ಧೂಳ ಬಲಿ ಉತ್ಸವ ನಡೆಯಲಿದೆ.

Ad Widget

Ad Widget
Continue Reading

ಕಾರ್ಯಕ್ರಮಗಳು

Sri Mahalingeshwara-ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ಹೊರೆಕಾಣಿಕೆ ಸಂಗ್ರಹಣಾ ಕಛೇರಿ ಉದ್ಘಾಟನೆ

Ad Widget

ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೊತ್ಸವದ ಪ್ರಯುಕ್ತ ಭಕ್ತಾದಿಗಳ ಅನುಕೂಲಕ್ಕಾಗಿ ಶ್ರೀ ದೇವಳದ ಎದುರು ಗದ್ದೆಯಲ್ಲಿ ಹೊರೆಕಾಣಿಕೆ ಸಂಗ್ರಹಣಾ ಕಛೇರಿ ತೆರೆಯಲಾಗಿದೆ.

Ad Widget

Ad Widget

Ad Widget

Ad Widget

ದೇವಳದ ಪ್ರಧಾನ ಅರ್ಚಕರು ವಿ ಎಸ್ ಭಟ್ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ದೇಳದ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ರವಿಪ್ರಸಾದ್ ಶೆಟ್ಟಿ ಬನ್ನೂರು, ಸುದೇಶ್ ಶೆಟ್ಟಿ ಶಾಂತಿನಗರ, ಪಂಜಿಗುಡ್ಡೆ ಈಶ್ವರ ಭಟ್, ದಿನೇಶ್ ಪಿ ವಿ, ಸುಭಾಸ್ ರೈ ಬೆಳ್ಳಿಪ್ಪಾಡಿ, ಉಮೇಶ್ ಆಚಾರ್ಯ ಕರ್ಮಲ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ನಯನಾ ರೈ ನೆಲ್ಲಿಕಟ್ಟೆ, ನಳಿನಿ ಪಿ ಶೆಟ್ಟಿ ಡ್ಯಾಶ್ ಮಾರ್ಕೆಟಿಂಗ್, ನವೀನ್ ನ್ಯಾಕ್ ಬೆದ್ರಳ, ಅರವಿಂದ್ ಪೆರಿಗೇರಿ ಉಸ್ಥಿತರಿದ್ದರು.

Ad Widget

Ad Widget

ಕಛೇರಿಯಲ್ಲಿ ತಂದೊಪ್ಪಿಸಿದ ಕಾಣಿಕೆಗಳಿಗೆ ರಶೀದಿ ನೀಡಲಾಗುವುದು. ಬೆಳಗ್ಗಿನಿಂದ ಸಂಜೆಯವರೆಗೆ ಕಛೇರಿ ಕಾರ್ಯನಿರ್ವಹಿಸಲಿದೆ ಎಂದು ವ್ಯವಸ್ಥಾಕರು ತಿಳಿಸಿದ್ದಾರೆ.

Ad Widget

Ad Widget
Continue Reading

ಕಾರ್ಯಕ್ರಮಗಳು

Puttur Jathre-ಪುತ್ತೂರು ವರ್ಷಾವಧಿ ಜಾತ್ರೆ

Ad Widget

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇಲ್ಲಿನ ವರ್ಷಾವಧಿ ಜಾತ್ರೆಯ ಏ.10 ರಿಂದ 20 ರವರೆಗೆ ನಡೆಯಲಿದೆ.

Ad Widget

Ad Widget

Ad Widget

Ad Widget

ದಿನಾಂಕ: 10-04-2024ನೇ ಬುಧವಾರ ಬೆಳಿಗ್ಗೆ 9:25 ನಂತರ ವೃಷಭ ಲಗ್ನದಲ್ಲಿ ಧ್ವಜಾರೋಹಣ ನಡೆದು ಕುರಿಯ ಮಾಡಾವು ಏಳ್ಳಾಡುಗುತ್ತುರವರಿಂದ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಅಂಕುರಾರ್ಪಣ, ಬಲಿ ಹೊರಟು ಉತ್ಸವ, ಬೊಳುವಾರು, ಶ್ರೀರಾಮ ಪೇಟೆ ಕಾರ್ಜಾಲು, ರಕೇಶ್ವರಿ ದೇವಸ್ಥಾನ,ಕಲ್ಲೇಗ, ಕರ್ಮಲ ಈ ಭಾಗದಲ್ಲಿ ದೇವರ ಸವಾರಿ ನಡೆಯಲಿದೆ.

Ad Widget

Ad Widget

ದಿನಾಂಕ:11-04-2024ನೇ ಗುರುವಾರ ಕ.ರಾ.ರ.ಸಾ.ನಿ. ಪುತ್ತೂರು ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಂದ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಉತ್ಸವ, ನಂತರ ನೆಲ್ಲಿಕಟ್ಟೆ, ಸಾಲ್ಮರ, ಸೂತ್ರಬೆಟ್ಟು ಈ ಭಾಗದಲ್ಲಿ ದೇವರ ಸವಾರಿ ನಡೆಯಲಿದೆ.

Ad Widget

Ad Widget

ದಿನಾಂಕ:12-04-2024ನೇ ಶುಕ್ರವಾರ ರಾತ್ರಿ ಉತ್ಸವ, ನಂತರ ಶಿವಪೇಟೆ,ತೆಂಕಿಲ,ಕೊಟ್ಟಿಬೆಟ್ಟು ಏಳ್ಳಾಡುಗುತ್ತು, ಬೈಪಾಸ್‌ ಹೆದ್ದಾರಿ, ರಾಧಾಕೃಷ್ಣ ಮಂದಿರ ಈ ಭಾಗದಲ್ಲಿ ದೇವರ ಸವಾರಿ ನಡೆಯಲಿದೆ.

Ad Widget

Ad Widget

ದಿನಾಂಕ :13-04-2024 ಶನಿವಾರ ಮೇಷ ಸಂಕ್ರಮಣ ರಾತ್ರಿ ಉತ್ಸವ, ನಂತರ ಪೇಟೆ ಸವಾರಿ, ಕೋರ್ಟು ರಸ್ತೆ, ಸೈನಿಕ ಭವನ ರಸ್ತೆ ಬಪ್ಪಳಿಗೆ, ಉರ್ಲಾಂಡಿ, ಬೊಳ್ವಾರ್‌ಬೈಲು ಈ ಭಾಗದಲ್ಲಿ ದೇವರ ಸವಾರಿ ನಡೆಯಲಿದೆ.

ದಿನಾಂಕ:14-04-2024ನೇ ಆದಿತ್ಯವಾರ ಸೌರಮಾನ ಯುಗಾದಿ (ವಿಷು) ಬೆಳಿಗ್ಗೆ ಉತ್ಸವ, ವಸಂತ ಕಟ್ಟೆಪೂಜೆ, ರಾತ್ರಿ ಉತ್ಸವ, ಬಂಡಿ ಉತ್ಸವ (ಚಂದ್ರಮಂಡಲ) ಕೊಂಬೆಟ್ಟು, ಬೊಳುವಾರು ಹಾರಾಡಿ, ತಾಳಿಪ್ಪಾಡಿ, ದ್ರಾವಿಡ ಬ್ರಾಹ್ಮಣ ಹಾಸ್ಟೆಲ್‌, ಸಕ್ಕರೆ ಕಟ್ಟೆ ಗೆ ದೇವರ ಸವಾರಿ ನಡೆಯಲಿದೆ.

ದಿನಾಂಕ:15-04-2024ನೇ ಸೋಮವಾರ ರಾತ್ರಿ ಉತ್ಸವ, ನಂತರ ಬನ್ನೂರು,ಅಶೋಕನಗರ,ರೈಲ್ವೆ ಭಾಗದಲ್ಲಿ ದೇವರ ಸವಾರಿ ನಡೆಯಲಿದೆ.

ದಿನಾಂಕ:16-04-2024ನೇ ಮಂಗಳವಾರ ಬೆಳಿಗ್ಗೆ ಗಂಟೆ 8.30ರಿಂದ ತುಲಾಭಾರ ಸೇವೆಯು ನಡೆಯಲಿದೆ. ರಾತ್ರಿ ಉತ್ಸವ, ನಂತರ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಮಾಮೂಲು ಪ್ರಕಾರ ಬರುವ ಕಿರುವಾಳು, ಪಾಲಕಿ ಉತ್ಸವ, ಸಣ್ಣ ರಥೋತ್ಸವ, ಕೆರೆ ಉತ್ಸವ,ತೆಪ್ಪೋತ್ಸವ ನಡೆಯಲಿದೆ.

ದಿನಾಂಕ:17-04-2024ನೇ ಬುಧವಾರ ಬೆಳಿಗ್ಗೆ ಉತ್ಸವ, ವಸಂತ ಕಟ್ಟೆಪೂಜೆ, ದರ್ಶನಬಲಿ,, ಬಟ್ಟಲುಕಾಣಿಕೆ, ಬ್ರಹ್ಮರಥ ದಾನಿ ದಿ.ನೆಟ್ಟಾಳ ಮುತ್ತಪ್ಪ ರೈ ದೇರ್ಲ ಇವರ ಸ್ಮರಣಾರ್ಥ ಸಹೋದರಿ, ಸಹೋದರರು ಹಾಗೂ ಮಕ್ಕಳಿಂದ ಮಧ್ಯಾಹ್ನ ಅನ್ನಸಂತರ್ಪಣೆ ಜರಗಳಿದೆ.

ರಾತ್ರಿ 7.30 ರ ನಂತರ ಉತ್ಸವ ನಡೆದು ಬಳಿಕ ಸಿಡಿಮದ್ದು ಪ್ರದರ್ಶನ( ಪುತ್ತೂರು ಬೆಡಿ) ದೊಂದಿಗೆ ಬ್ರಹ್ಮರಥೋತ್ಸವ ನಡೆಯಲಿದೆ. ನಂತರ ಬಂಗಾ‌ರ್ ಕಾಯರ್‌ಕಟ್ಟೆ ಭಾಗದಲ್ಲಿ ದೇವರ ಸವಾರಿ ನಡೆಯಲಿದೆ.

ಶ್ರೀ ದಂಡನಾಯಕ – ಉಳ್ಳಾಲ್ತಿ ದೈವಗಳ ಬೀಳ್ಕೊಡುಗೆ, ಶ್ರೀ ಭೂತಬಲಿ, ಶಯನ ನಡೆಯಲಿದೆ.

ದಿನಾಂಕ:18-04-2024ನೇ ಗುರುವಾರ ಬೆಳಿಗ್ಗೆ 7.30ಕ್ಕೆ ದೇವರ ಬಾಗಿಲು ತೆಗೆಯುವ ಮುಹೂರ್ತ, ಬೆಳಿಗ್ಗೆ 8.30ರಿಂದ ತುಲಾಭಾರ ಸೇವೆಯು ಜರಗಳಿದೆ. ಸಂಜೆ ಗಂಟೆ 3.30 ದೇವರು ಅವಭ್ರತ ಸ್ನಾನಕ್ಕೆ ವೀರಮಂಗಲಕ್ಕೆ ಸವಾರಿ ಹೊರಡುವುದು.

ದಿನಾಂಕ :19-04-2024 ಶುಕ್ರವಾರ ಬೆಳಿಗ್ಗೆ ಧ್ವಜಾವರೋಹಣ ನಡೆಯಲಿದೆ. ರಾತ್ರಿ ಚೂರ್ಣೋತ್ಸವ ವಸಂತ ಪೂಜೆ ಪ್ರಾರಂಭಗೊಳ್ಳುವುದು, ಹುಲಿಭೂತ, ರಕೇಶ್ವರಿ ನೇಮ ಜರಗಳಿದೆ.

20.04.2024ನೇ ಶನಿವಾರ ಸಂಪ್ರೋಕ್ಷಣೆ, ರಾತ್ರಿ ಮಂತ್ರಾಕ್ಷತೆ, ಅಂಜಣತ್ತಾಯ, ಪಂಜುರ್ಲಿ ವಗೈರೆ ದೈವಗಳ ನೇಮ ಜರಗಳಿದೆ.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading