ಮಂಗಳೂರು, ಅ.10: ಎರಡು ಮಕ್ಕಳ ತಾಯಿ ಮಕ್ಕಳನ್ನು ತಾವು ವಾಸವಾಗಿದ್ದ ಬಾಡಿಗೆ ಮನೆಯಲ್ಲಿ ಬಿಟ್ಟು ನಾಪತ್ತೆಯಾಗಿರುವ ಬಗ್ಗೆ ಆಕೆಯ ಪತಿ ನಾಗೇಶ್ ಶೆರಿಗುಪ್ಪೆ ಎಂಬವರು ನೀಡಿದ ದೂರಿನಂತೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೆಲೆನ್ಸಿಯ ನಿವಾಸಿ ನಾಗೇಶ್ ಶೆರಿಗುಪ್ಪೆರವರ ಪತ್ನಿ ವಿಜಯಲಕ್ಷ್ಮಿ (26) ನಾಪತ್ತೆಯಾದ ವಿವಾಹಿತ ಮಹಿಳೆ .ದಂಪತಿಗಳು ವೆಲೆನ್ಸಿಯಾದ ಸುವರ್ಣ ರಸ್ತೆಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಎಂಟು ವರ್ಷದಿಂದ ವಾಸಿಸುತ್ತಿದ್ದರು. ವಿಜಯಲಕ್ಷ್ಮಿಯವರು ಅದೇ ಅಪಾರ್ಟ್‌ಮೆಂಟ್ ನಲ್ಲಿ ವಾಚ್ ಮ್ಯಾನ್ ಆಗಿಯೂ ಕೆಲಸ ನಿರ್ವಹಿಸುತ್ತಿದ್ದರು. ನಾಗೇಶ್ ರವರು ರವಿ ಎಂಬವರ ಕಾರು ಚಾಲಕರಾಗಿ ದುಡಿಯುತ್ತಿದ್ದಾರೆ.
ಅ. 10 ರಂದು ಬೆಳಿಗ್ಗೆ ಎಂದಿನಂತೆ ನಾಗೇಶ್ ತನ್ನ ಕೆಲಸಕ್ಕೆ ತೆರಳಿದ್ದರು . ಮಧ್ಯಾಹ್ನ ನಾಗೇಶ್ʼರವರಿಗೆ ಪೋನ್ ಕರೆ ಮಾಡಿದ ಅವರು ವಾಸವಿದ್ದ ಅಪಾರ್ಟ್ ಮೆಂಟ್‌ನವರು, ವಿಜಯಲಕ್ಷ್ಮಿಯವರಲ್ಲಿ ಜನರೇಟರ್ ಆನ್ ಮಾಡಲೆಂದು ತಿಳಿಸಲು ಸಂಪರ್ಕಿಸಲು ಯತ್ನಿಸುತ್ತಿದ್ದು, ಅದರೇ ಕಾಣಿಸದಿರುವ ಮಾಹಿತಿಯನ್ನು ನೀಡಿದ್ದಾರೆ
ಹೀಗಾಗಿ ಅಪಾರ್ಟ್‌ಮೆಂಟ್‌ಗೆ ಬಂದ ನಾಗೇಶ್ ಮನೆಯಲ್ಲಿ ಪತ್ನಿಗೆ ಹುಡುಕಾಡಿದರೂ ಪತ್ತೆಯಾಗಿಲ್ಲ. . ಮಕ್ಕಳು ಇಬ್ಬರನ್ನೂ ಬಿಟ್ಟು ಕಾಣೆಯಾಗಿರುವುದು ಕಂಡುಬಂದಿದೆ.ನಂತರ ಪತ್ನಿಯ ಫೋನ್‌ಗೆ ಕರೆ ಮಾಡಿದಾಗ ಮೊಬೈಲ್ ಫೋನ್ ಸ್ವಿಚ್‌ಆಫ್ ಎಂದು ಬಂದಿದೆ. ಸಂಬಂಧಿಕರು, ನೆರೆಹೊರೆಯ ವರಲ್ಲಿ ವಿಚಾರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಪತ್ನಿಯನ್ನು ಹುಡುಕಿ ಕೊಡಿ ಎಂದು ಗಂಡ ನಾಗೇಶ್ ಪೊಲೀಸರಿಗೆ ದೂರು ನೀಡಿದ್ದಾರೆ.

ಚಹರೆ: 5.1 ಅಡಿ ಎತ್ತರ, ಗೋಧಿ ಮೈ ಬಣ್ಣ, ಸಾಧಾರಣ ಶರೀರ, ಕಪ್ಪು ಬಣ್ಣದ ಚೂಡಿದಾರದ ಪ್ಯಾಂಟ್, ನೀಲಿ ಹಾಗೂ ಹಳದಿ ಬಣ್ಣದ ಹೂಗಳಿರುವ ಚೂಡಿದಾರದ ಟಾಪ್ ಧರಿಸಿದ್ದರು. ನಾಪತ್ತೆಯಾದ ವಿವಾಹಿತ ಯುವತಿಯ ಚಹರೆ ಹೊಂದಿರುವವರು ಕಂಡು ಬಂದಲ್ಲಿ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಗೆ (0824- 2220518, 9448221401) ಮಾಹಿತಿ ನೀಡಲು ಪ್ರಕಟನೆ ತಿಳಿಸಿದೆ.