ಬೆಂಗಳೂರು: ಜೋರಾಗಿ ಮಳೆ ಬೀಳುತ್ತಿದ್ದ ಸೆ. 29 ರ ಸಂಜೆ ಹುಡುಗಿಯೊಬ್ಬಳು ನೆನೆಯುತಾ ತರಕಾರಿ ಅಂಗಡಿಗೆ ಬಂದಿದ್ದಾಳೆ. ಅಲ್ಲಿದ್ದ ಅಂಗಡಿ ಮಾಲಕರ ಜತೆ ಆಕೆ ತುಂಬಾ ಕ್ಲೋಸಾಗಿ ಮಾತುಕತೆ ನಡೆಸಿದ್ದಾಳೆ. ಕೆಲ ಸಮಯದ ಬಳಿಕ ಅವರಿಬ್ಬರ ನಡುವೆ ಮೊಬೈಲ್ ನಂಬರ್ ವಿನಿಮಯವೂ ನಡೆದಿದೆ.
ಬಳಿಕ ಮೊಬೈಲ್‌ನಲ್ಲಿ ಚಾಟಿಂಗ್ ಶುರುವಾಯಿತು. ಆಕೆ ಈ ಚಾಟಿಂಗ್ ನಲ್ಲಿ ತರಕಾರಿ ವ್ಯಾಪರಿಯನ್ನು ಚಿನ್ನಾ ,ಚಿನ್ನಾ ಎಂದೇ ಸಂಬೋದಿಸುತ್ತಿದ್ದಳು,ಆತ್ಮೀಯವಾಗಿ ಮಾತನಾಡುತ್ತಿದ್ದಳು. ಭೇಟಿಯ ಒಂದೇರಡು ದಿನಗಳಲ್ಲಿಯೇ ಎಲ್ಲಿಯಾದರೂ ಭೇಟಿಯಾಗೋಣ ಎಂದು ಆಕೆ ಹೇಳಿದಳು ವ್ಯಾಪಾರಿ ಗೋಣು ಅಲ್ಲಾಡಿಸಿದ.
ಆಕೆ ಆತನನ್ನು ನಿರ್ಜನ ಪ್ರದೇಶಕ್ಕೆ ಬರ ಹೇಳೀದಳು. ಅಲ್ಲಿ ಅವರಿಬ್ಬರು ಕೂತು ಮಾತನಾಡುತ್ತಿದ್ದರೇ, ಸ್ಥಳಕ್ಕೆ ಬಂದ ತಂಡವೊಂದು, ‘ನಮ್ಮ ಹುಡುಗಿ ಜೊತೆ ಏಕೆ ಕುಳಿತುಕೊಂಡಿದ್ದಿಯಾ? ನಿನ್ನನ್ನು ಸುಮ್ಮನೇ ಬಿಡುವುದಿಲ್ಲ’ ಎಂದು ಬೆದರಿಸಿದ್ದರು. ದೂರುದಾರರ ಬಳಿ ಇದ್ದ ₹ 5,000 ನಗದು, ಎಟಿಎಂ ಕಾರ್ಡ್ ಕಿತ್ತುಕೊಂಡಿದ್ದರು. ಅವರ ಮೊಬೈಲ್‌ನ ಫೋನ್ ಪೇ ಆ್ಯಪ್ ಮೂಲಕ ₹ 32 ಸಾವಿರ ವರ್ಗಾಯಿಸಿ ಕೊಂಡರು . ಬಳಿಕ ಆ ತಂಡ ಅಲ್ಲಿಂದ ಪರಾರಿಯಾಯಿತು. ಇಂಗು ತಿಂದ ಮಂಗನಂತಾದ ಆ ವ್ಯಾಪಾರಿ ಯುವತಿಯ ಮುಖ ನೋಡಿದರೇ ಆಕೆ ಎನೂ ಗೊತ್ತಿಲ್ಲದವರಂತೆ ಬಾಯಿಗೆ ಬೀಗ ಹಾಕಿ ಕೂತಿದ್ದಳು.
ಈ ಘಟನೆ ಕೆಲ ದಿನಗಳ ಹಿಂದೆ ಬೆಂಗಳೂರು ನಗರದಆಗ್ನೇಯ ವಿಭಾಗದ ಮೈಕೊ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು. ಎಲ್ಲವನ್ನೂ ಕಳಕೊಂಡು ಬರಿಗೈಯಲ್ಲಿ ವ್ಯಾಪಾರಿಯೂ ಮೈಕೊ ಲೇಔಟ್ ಠಾಣೆಗೆ ಬಂದು ದೂರು ನೀಡಿದ್ದಾನೆ. ಅನುಮಾನಗೊಂಡ ಪೊಲೀಸರು ಯುವತಿಯನ್ನು ಪತ್ತೆ ಹಚ್ಚಿ ತನಿಖೆ ನಡೆಸಿದ್ದಾರೆ. ಈ ವೇಳೆ ಇದೊಂದು ಹನಿ ಟ್ರ್ಯಾಪ್ ಜಾಲ ಎನ್ನುವುದು ಅವಳು ಬಾಯ್ಬಿಟ್ಟಿದ್ದಾಳೆ.

ಆಕೆ ನೀಡಿದ್ದ ಮಾಹಿತಿಯಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತಷ್ಟು ಮಂದಿ ಕೃತ್ಯದಲ್ಲಿ ಭಾಗಿಯಾಗಿರುವ ಮಾಹಿತಿ ಇದೆ’ ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಷಿ ಹೇಳಿದರು.
‘ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ತರಕಾರಿ ವ್ಯಾಪಾರಿಯೊಬ್ಬರು ಹನಿಟ್ರ್ಯಾಪ್ ಜಾಲದ ಬಗ್ಗೆ ದೂರು ನೀಡಿದ್ದರು. ತನಿಖೆ ಕೈಗೊಂಡು ಯುವತಿ ಹಾಗೂ ಆಕೆಯ ಇಬ್ಬರು ಸಹಚರರನ್ನು ಬಂಧಿಸಲಾಗಿದೆ. ಅವರಿಂದ ₹ 16 ಸಾವಿರ ನಗದು, ಕಾರು, ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ’ಎಂದು ತಿಳಿಸಿದ್ದಾರೆ