ಪುತ್ತೂರು,ಅ.10: ಮಾನಸ ಟೈಮ್ಸ್ ಆಂಡ್ ಆಪ್ಟಿಕಲ್ಸ್ ಮಾಲಕರಾದ ಕೇಶವ ಮೂರ್ತಿ ಹಾಗೂ ಡಿ.ಎನ್.ಪ್ರಸಾದ್ ಅವರ ಮಾತೃಶ್ರೀ ದಿ.ಶ್ಯಾಮ್ ಭಟ್ ಅವರ ಧರ್ಮ ಪತ್ನಿ ಸಮೃದ್ಧಿ ನಿಲಯ ನಿವಾಸಿ ಸದಾರಮಾ (78) ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ.
ಅಲ್ಪ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇಂದು ಬೆಳಗಿನ ಜಾವ ನಿಧನ ಹೊಂದಿದರು.
ಮೃತರು ಪುತ್ರಿ ಪ್ರೇಮಾ ವಸಂತ್, ಪುತ್ರರಾದ ಕೇಶವ ಮೂರ್ತಿ, ಡಿ.ಎನ್ ಪ್ರಸಾದ್, ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳು ಸಹಿತ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.