ಪುತ್ತೂರು,ಅ.10: ಪುತ್ತೂರು ಬಲ್ನಾಡು ಪಕ್ರಬ ಎಂಬವರ ಮಗ ಪುತ್ತೂರು M T ರೋಡ್ ಗೋಲ್ಡನ್ ಬೇಕರಿಯ ಮಾಲಕ ಅಬ್ದುಲ್ ಅಝೀಝ್ (35) ಎಂಬವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ತನ್ನ ಮನೆಯಿಂದ ಅಂಗಡಿಗೆ ಬರುತ್ತಿದ್ದಾಗ ಬಲ್ನಾಡಿನಲ್ಲಿ ಲಾರಿ ಮತ್ತು ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಲಾರಿಯ ಟೈರ್ ಅಡಿಗೆ ಬಿದ್ದು ಟೈರ್ ತಲೆ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಎರಡು ವಾರಗಳಲ್ಲಿ ವಿದೇಶಿ ಪ್ರಯಾಣ ಮಾಡಲು ಸಿದ್ಧತೆ ನಡೆಸುತ್ತಿದ್ದ ಅಝೀಜ್ ವಿಧಿಯಾಟಕ್ಕೆ ಬಲಿಯಾಗಿದ್ದಾರೆ.
ಎರಡು ದಿನಗಳ ಹಿಂದೆ ಜೀಪೊಂದು ಕೆಟ್ಟು ನಿಂತ ಪರಿಣಾಮ ರಸ್ತೆ ಮೇಲೆ ಆಯಿಲ್ ಚೆಲ್ಲಿಕೊಂಡಿತ್ತು. ಇದರಿಂದ ದ್ವಿಚಕ್ರ ವಾಹನಗಳು ಸ್ಕಿಡ್ ಆಗುತ್ತಿದ್ದವು. ಅದೇ ಸ್ಥಳದಲ್ಲಿ ಇಂದು ಅಪಘಾತ ಸಂಭಾವಿಸಿದ್ದು ಅಝೀಜ್ ಅವರ ಸ್ಕೂಟರ್ ಸ್ಕಿಡ್ ಆಗಿಯೇ ಲಾರಿಯಡಿ ಬಿದ್ದಿರಬಹುದೇ ಎಂದು ಸಂಶಯಿಸಲಾಗಿದೆ.
ಮೃತರ ಶರೀರವನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ.