Ad Widget

ಸೂಸೈಡ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಶಿವಮೊಗ್ಗ ಡಿಸಿ ಆಫೀಸ್‌ ಸಿಬ್ಬಂದಿ ಅಸ್ವಸ್ಥ ಸ್ಥಿತಿಯಲ್ಲಿ ಧರ್ಮಸ್ಥಳದಲ್ಲಿ ಪತ್ತೆ

sucide
Ad Widget

Ad Widget

Ad Widget

ಮೇಲಾಧಿಕಾರಿಗಳ ಕಿರುಕುಳದಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸೂಸೈಡ್‌ ​ನೋಟ್ ಬರೆದಿಟ್ಟು ಶಿವಮೊಗ್ಗ  ಜಿಲ್ಲಾಧಿಕಾರಿ ಕಚೇರಿಯಿಂದ ನಾಪತ್ತೆಯಾಗಿದ್ದ ಪ್ರಥಮ ದರ್ಜೆ ಸಹಾಯಕ (ಎಫ್​ಡಿಎ) ಧರ್ಮಸ್ಥಳದಲ್ಲಿ ಸೆ.7 ರಂದು ಪತ್ತೆಯಾಗಿದ್ದಾರೆ.

Ad Widget

Ad Widget

Ad Widget

Ad Widget

ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ (ಎಫ್​ಡಿಎ) ಗಿರಿರಾಜ್ ನಾಪತ್ತೆಯಾಗಿ ಈಗ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿರುವ ವ್ಯಕ್ತಿ. ಸೆ. 28ರಂದು ಇವರು ಸೂಸೈಡ್‌ ​ನೋಟ್ ಬರೆದಿಟ್ಟು ನಿಗೂಢವಾಗಿ ಪತ್ತೆಯಾಗಿದ್ದರು. ಇದಾದ ಬಳಿಕ ಗಿರಿರಾಜ್​ ಪತ್ನಿ ಜ್ಯೋತಿ, ಶಿವಮೊಗ್ಗದ ಜಯನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ದರು.

Ad Widget

Ad Widget

Ad Widget

Ad Widget

ಗಿರಿರಾಜ್​ ಅವರನ್ನು ಪತ್ತೆ ಮಾಡಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಾಕಷ್ಟು ಶೋಧ ಕಾರ್ಯ ನಡೆಸಿತ್ತು. ಆದಾಗ್ಯೂ ಗಿರಿರಾಜ್ ಪತ್ತೆಯಾಗಿರಲಿಲ್ಲ. ಇದೀಗ ನಾಪತ್ತೆಯಾದ 10 ದಿನಗಳ ಬಳಿಕ ಗಿರಿರಾಜ್​ ಅಸ್ವಸ್ಥ ಸ್ಥಿತಿಯಲ್ಲಿ ಧರ್ಮಸ್ಥಳದಲ್ಲಿ ಪತ್ತೆಯಾಗಿದ್ದಾರೆ.

ಗಿರಿರಾಜ್‌  ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದಿಟ್ಟಿರುವ ಡೆತ್​ನೋಟ್​​ನಲ್ಲಿ ಮೇಲಧಿಕಾರಿಗಳ ಕಿರುಕುಳದ ಕುರಿತು ಉಲ್ಲೇಖವಿದೆ.  ಇವರ ನಾಪತ್ತೆ ಪ್ರಕರಣ ಶಿವಮೊಗ್ಗ ಡಿಸಿ ಕಚೇರಿ ಸಿಬ್ಬಂದಿವರ್ಗದಲ್ಲಿ ಆತಂಕಕ್ಕೆ ಕಾರಣವಾಗಿತ್ತು.  

Ad Widget

Ad Widget
Ad Widget

Leave a Reply

Recent Posts

Belthangady | ಕುತಂತ್ರಿ ಬುದ್ದಿ ಬಿಟ್ಟು ಚುನಾವಣೆಯನ್ನು ಚುನಾವಣೆಯ ರೀತಿ ಎದುರಿಸಿ – ಜನಾರ್ಧನ ಪೂಜಾರಿಗೆ ಹಿಂದೂ ವಿರೋಧಿಯೆಂದು ಅಪಪ್ರಚಾರ ಮಾಡಿದ ತಂಡವೇ ಬೆಳ್ತಂಗಡಿಯ ರಕ್ಷಿತ್ ಶಿವರಾಂ ಗೂ ಮಾಡುತ್ತಿದೆ : ಖಡಕ್ ಎಚ್ಚರಿಕೆ ಕೊಟ್ಟ ‘ನಮ ಬಿಲ್ಲವೆರ್’

error: Content is protected !!
%d bloggers like this: