ಮಂಗಳೂರು: ಖಾಸಗಿ ಕಾಲೇಜುವೊಂದರ ಬಳಿ ನಿಂತಿದ್ದ ಭಿನ್ನ ಕೋಮಿಗೆ ಸೇರಿದ ಯುವಕ ಮತ್ತು ಯುವತಿ ಜೋಡಿಗೆ ಹಿಂದು ಪರ ಸಂಘಟನೆಯ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಮೇರೆಗೆ ಇಬ್ಬರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ ಘಟನೆ ಮಂಗಳೂರಿನ ಕದ್ರಿ ಠಾಣಾ ವ್ಯಾಪ್ತಿಯಲ್ಲಿ ಅ .6 ರಂದು ನಡೆದಿದೆ.
ಹಿಂದೂ ಪರ ಸಂಘಟನೆಯೊಂದರ ಕಾರ್ಯಕರ್ತರೆಂದು ಹೇಳಲಾದ ಜಯಪ್ರಕಾಶ್ ಹಾಗೂ ಪೃಥ್ವಿ ಬಂಧಿತ ಆರೋಪಿಗಳು. ತಂಡವೊಂದು ತನ್ನ ಮೇಲೆ ಹಲ್ಲೆ ನಡೆಸಿದೆ ಎಂದು ಯುವತಿ ಮಂಗಳೂರು ಪೂರ್ವ (ಕದ್ರಿ) ಠಾಣೆಗೆ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಏನಿದು ಘಟನೆ ?
ಬುಧವಾರ ಸಂಜೆಯ ಮಂಗಳೂರು ನಗರದ ಖಾಸಗಿ ಕಾಲೇಜೊಂದರ ಸಮೀಪದ ಯುವ ಜೋಡಿಯೊಂದು ನಿಂತಿತ್ತು. ಈ ವೇಳೆ ಅಲ್ಲಿಗೆ ಸಂಘಟನೆಯ ತಂಡವೊಂದು ಬಂಧಿದೆ. ಈ ಸಂದರ್ಭ ಹೊಯ್ ಕೈ ನಡೆದಿದೆ ಎಂದು ಹೇಳಲಾಗುತ್ತಿದೆ. ಬಳಿಕ ಆ ಯುವ ಜೋಡಿಯನ್ನು ಸಂಘಟನೆಯ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಳಿಕದ ಬೆಳವಣಿಗೆಯಲ್ಲಿ ಯುವತಿ ಯುವಕರ ವಿರುದ್ದ ಠಾಣೆಗೆ ದೂರು ನೀಡಿದ್ದು, ಸಂಘಪರಿವಾರ ಕಾರ್ಯಕರ್ತರು ತಮ್ಮನ್ನು ಥಳಿಸಿ, ಇಲ್ಲಿಗೆ ಕರೆತಂದಿದ್ದಾರೆ ಎಂದು ಆರೋಪಿಸಿದ್ದಾರೆ.