ಮಂಗಳೂರು: ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ಕಾಲೇಜ್ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ನಗರ ವ್ಯಾಪ್ತಿಯಲ್ಲಿ ನಡೆದ ಬಗ್ಗೆ ಅ. 6 ರಂದು ವರದಿಯಾಗಿದೆ. ಕೇರಳದ ಕಣ್ಣೂರು ಜಿಲ್ಲೆಯ ಚೆರುಪ್ಪುಳ ನಿವಾಸಿ ನೀನಾ ಸತೀಶ್ (21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.
ಈಕೆ ಮಂಗಳೂರಿನ ಕೊಲಾಸೋ ನರ್ಸಿಂಗ್ ಕಾಲೇಜಿನ ಬಿಎಸ್ ಸಿ ನರ್ಸಿಂಗ್ ನ ಪ್ರಥಮ ವರ್ಷದ ವಿದ್ಯಾರ್ಥಿನಿ. ಮಂಗಳವಾರ ಸಂಜೆ ಕದ್ರಿಯಲ್ಲಿರುವ ಕಾಲೇಜಿನ ಹಾಸ್ಟೇಲ್ ನ ಬಾತ್ ರೂಮ್ ನಲ್ಲಿ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹಾಸ್ಟೇಲ್ ರೂಮ್ ನಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಈ ವೇಳೆ ಬಾತ್ ರೂಮ್ ಒಳಗೆ ಪ್ರವೇಶಿಸಿದ ರೂಮ್ ಮೇಟ್ ನೀನಾ ನೇಣು ಬಿಗಿದು ನೇತಾಡುತ್ತಿರುವುದನ್ನು ನೋಡಿ ಆಘಾತಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆತ್ಮಹತ್ಯೆ ಯತ್ನಿಸಿದ ನೀನಾ ಇಂದು ಬೆಳಿಗ್ಗೆ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾಳೆ.
ಆಕೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದ್ದು ಅದರಲ್ಲಿ ಮನೆಯವರಿಗೆ ಅರ್ಥಿಕ ಸಂಕಷ್ಟ ನೀಡಲು ಮನಸ್ಸಿಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಾಳೆ ಎಂದು ತಿಳಿದು ಬಂದಿದೆ.

ಬಾಕಿ ಪೀಸ್ ಪಾವತಿಗೆ ಕಾಲೇಜ್ʼನಿಂದ ಒತ್ತಡ ?
ಕೊಲಾಸೋ ಕಾಲೇಜಿನಲ್ಲಿ ಪ್ರಥಮ ಬಿಸ್ಸಿ ನರ್ಸಿಂಗ್ ವ್ಯಾಸಂಗ ಮಾಡಲು 1.25 ಲಕ್ಷ ರೂಪಾಯಿ ಶುಲ್ಕ ನಿಗದಿ ಪಡಿಸಿದ್ದರು .ಈ ಪೈಕಿ ಸುಮಾರು 75 ಸಾವಿರ ರೂಪಾಯಿ ಫೀಸನ್ನು ಮೊದಲ ಕಂತಾಗಿ ನೀನಾ ಪಾವತಿ ಮಾಡಿದ್ದಳು ಎಂದು ಮೂಲಗಳು ತಿಳಿಸಿವೆ. ಬಾಕಿ ಹಣವನ್ನು ಪಾವತಿ ಮಾಡುವಂತೆ ಕಾಲೇಜಿನ ಆಡಳಿತ ಮಂಡಳಿ ಒತ್ತಡ ಹಾಕಿದ್ದರು ಎನ್ನಲಾಗುತ್ತಿದ್ದು ಆ ಹಣವನ್ನು ಪಾವತಿಸಲು ಆಕೆಯಿಂದ ಸಾಧ್ಯವಾಗಿರಲಿಲ್ಲ
ಬಾಕಿ ಹಣ ಪಾವತಿ ಮಾಡದೇ ಇದ್ರೆ ಯೂನಿಫಾರ್ಮ ನೀಡುವುದಿಲ್ಲ ಎಂದು ಕಾಲೇಜ್ ಅಡಳಿತ ಮಂಡಳಿ ತಿಳಿಸಿದ್ದೂ ಇದೇ ಕಾರಣಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್ ಅವರು ತಿಳಿಸಿದ್ದಾರೆ.

ತನ್ನ ತಾಯಿ ಕೂಲಿ ಮಾಡಿ ವಿದ್ಯಾಭ್ಯಾಸವನ್ನು ನೀಡುತ್ತಿದ್ದೂ ಇನ್ನು ತಾಯಿಗೆ ಕಷ್ಟಕೊಡಲು ತಾನು ರೆಡಿಯಿಲ್ಲ ಅನ್ನೋ ವಿಚಾರವನ್ನೂ ಕೂಡ ಆಕೆ ಸೂಸೈಡ್ ನೋಟ್ ನಲ್ಲಿ ಉಲ್ಲೇಖಿಸಿದ್ದಾಳೆ ಎನ್ನಲಾಗುತ್ತಿದೆ.