ನೌಕರನ ಮೇಲೆ ಕೋಪದಲ್ಲಿ ಉದ್ಯಮಿ ಹೊಡೆದ ಗುಂಡು ತಪ್ಪಿ ಮಗನ ತಲೆಗೆ ಬಿದ್ದ ಘಟನೆ ಮಂಗಳೂರಿನ ಮೋರ್ಗನ್ ಗೇಟ್ ಬಳಿ ಸೆ. 5 ರಂದು ವರದಿಯಾಗಿದೆ. ವೈಷ್ಣವಿ ಎಕ್ಸ್ ಪ್ರೆಸ್ ಕಾರ್ಗೋ ಪ್ರೈ. ಲಿ. ಇದರ ಮಾಲಕ ರಾಜೇಶ್ ಪ್ರಭು ಗುಂಡು ಹಾರಿಸಿದವರು ಎಂದು ಹೇಳಲಾಗುತ್ತಿದೆ
ಕೃತ್ಯವೂ ವೈಷ್ಣವಿ ಎಕ್ಸ್ ಪ್ರೆಸ್ ಕಾರ್ಗೋ ಪ್ರೈ. ಲಿ. ಇದರ ಮೋರ್ಗನ್ ಗೇಟ್ ಕಚೇರಿಯಲ್ಲಿ ಘಟನೆ ನಡೆದಿದೆ. ರಾಜೇಶ್ ಪ್ರಭು ಪುತ್ರ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಸುದೀಂದ್ರ ಪ್ರಭು ಗುಂಡು ತಗುಲಿ ಗಾಯಗೊಂಡ ಬಾಲಕ.
ವೇತನದ ವಿಚಾರವಾಗಿ ನೌಕರ ಹಾಗೂ ರಾಜೇಶ್ ಪ್ರಭು ಮಧ್ಯೆ ಗಲಾಟೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ವೇಳೆ ರಾಜೇಶ್ ಪ್ರಭು ಸಿಟ್ಟಿನಿಂದ ತನ್ನ ಪಿಸ್ತೂಲ್ ತೆಗೆದು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಈ ಗುಂಡು ಗುರಿ ತಪ್ಪಿ ಸುಧೀಂದ್ರನ ತಲೆಗೆ ಬಿದ್ದಿದೆ. ಇದರಿಂದ ಬಾಲಕ ಗಾಯಗೊಂಡಿದ್ದಾನೆ. ಘಟನೆಯೂ ಕಛೇರಿಯ ಹೊರಭಾಗದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಮಂಗಳೂರು ಪೊಲೀಸ್ ಕಮೀಷನರ್ ಶಶಿ ಕುಮಾರ್ ಎನ್ ಹಾಗೂ ಇತರ ಹಿರಿಯ ಅಧಿಕಾರಿಗಳು, ವಿಧಿ ವಿಜ್ನಾನ ಇಲಾಖೆಯ ಸಿಬಂದಿಗಳು ಬಂದು ತನಿಖೆ ನಡೆಸುತ್ತಿದ್ದಾರೆ