ಪುತ್ತೂರು: ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದರಾಗಿದ ಕೃಷಿಕರೊಬ್ಬರು ವಿದ್ಯುತ್ ಶಾಕ್ ಗೆ ತುತ್ತಾಗಿ ಮೃತಪಟ್ಟ ಧಾರುಣ ಘಟನೆ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದಲ್ಲಿ ಅ. 6 ರಂದು ಮಧ್ಯಾಹ್ನ ನಡೆದಿದೆ.
ಕರ್ನೂರು ಭಾವ ನಿವಾಸಿ ಕುದ್ಕಾಡಿ ದಿ.ಸೋಮಪ್ಪ ರೈಯವರ ಪುತ್ರ ಧನಂಜಯ ರೈಯವರು ಮೃತಪಟ್ಟ ದುರ್ದೈವಿ. ಮೃತರು ಪತ್ನಿ ಅಮಿತಾ ಪುತ್ರಿಯರಾದ ದೀನಾ ಮತ್ತು ಧ್ಯಾನ ಅವರನ್ನು ಅಗಲಿದ್ದಾರೆ.
ಇವರು ತನ್ನ ಪತ್ನಿಯ ಮನೆಯಾದ ಕೆದಂಬಾಡಿ ಬೊಳೋಡಿಯಲ್ಲಿದ್ದಾಗ ದುರ್ಘಟನೆ ಸಂಭವಿಸಿದೆ. ಅಲ್ಲಿ ಅವರು ತೋಟಕ್ಕೆ ಹೋಗಿದ್ದು ಈ ವೇಳೆ ಅವರಿಗೆ ಅಕಸ್ಮಿಕವಾಗಿ ವಿದ್ಯುತ್ ಶಾಕಿಗೆ ತುತ್ತಾಗಿದ್ದಾರೆ ಎನ್ನಲಾಗಿದೆ. ಕೂಡಲೇ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೇ ಆಸ್ಫತ್ರೆಗೆ ತಲುಪುತ್ತಲೇ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
