Connect with us

ಕಾರ್ಯಕ್ರಮಗಳು

ಪುತ್ತೂರಿಗೆ ಭೇಟಿ ನೀಡಿದ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ. ನಾರಾಯಣ ಸ್ವಾಮಿ

Ad Widget

Ad Widget

Ad Widget

Ad Widget Ad Widget

ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ ನಾರಾಯಣ ಸ್ವಾಮಿ ಅ.3 ರಂದು ರಾತ್ರಿ ಪುತ್ತೂರಿಗೆ ಆಗಮಿಸಿದರು. ಬಂಟ್ವಾಳದಲ್ಲಿ ಇಂದು (ಅ. 4) ನಡೆಯಲಿರುವ ʼಅಂತ್ಯೋದಯʼ ಕಾರ್ಯಕ್ರಮದ ಉದ್ಘಾಟಕರಾಗಿ ಭಾಗವಹಿಸುವ ನಿಟ್ಟಿನಲ್ಲಿ ಆಗಮಿಸಿರುವ ಚಿತ್ರದುರ್ಗದ ಸಂಸದರೂ ಆಗಿರುವ ಸಚಿವರು ನಿನ್ನೆ ರಾತ್ರಿ ಪುತ್ತೂರಿನ ಐಬಿಯಲ್ಲಿ ತಂಗಿದ್ದರು.

Ad Widget

Ad Widget

Ad Widget

Ad Widget

Ad Widget

ಇಂದು ಬೆಳಿಗ್ಗೆ ಸಚಿವರು ಜಿಲ್ಲೆಯ ಹಿರಿಯ ರಾಜಕಾರಣಿ, ಬಿಜೆಪಿಯನ್ನು ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ ಪುತ್ತೂರಿನ ಮಾಜಿ ಮಾಜಿ ಶಾಸಕ ಉರಿಮಜಲು ರಾಮ ಭಟ್ ಅವರ ಕೊಂಬೆಟ್ಟುವಿನ ಮನೆಗೆ ಭೇಟಿ ನೀಡಿದರು. ರಾಮ ಭಟ್‌ ಅವರ ಯೋಗಕ್ಷೇಮ ವಿಚಾರಿಸಿದ ಸಚಿವರು ಕೆಲ ಹೊತ್ತು ಅಲ್ಲಿ ಕಳೆದರು. ಈ ಸಂದರ್ಭ ಅವರಿಗೆ ನಳಿನ್ ಕುಮಾರ್ ಕಟೀಲ್, ಶಾಸಕ ಸಂಜೀವ ಮಠಂದೂರು ಸಾಥ್‌ ನೀಡಿದರು.

Ad Widget

Ad Widget

ಈ ಸಂದರ್ಭ ನಗರಸಭಾ ಅಧ್ಯಕ್ಷ ಕೆ ಜೀವಂಧರ್ ಜೈನ್, ಬಿಜೆಪಿ ಜಿಲ್ಲಾ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಪ್ರಧಾನ ಕಾರ್ಯದರ್ಶಿಗಳಾದ ಯುವರಾಜ್, ನಿತೀಶ್ ಶಾಂತಿವನ, ತಾ.ಪಂ ಮಾಜಿ ಸದಸ್ಯ ಹರೀಶ್ ಬಿಜತ್ರೆ, ನವೀನ್ ಪಡಿವಾಳ್, ಧರ್ಣಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು.

Ad Widget

Ad Widget
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಚಿವ ಎ. ನಾರಾಯಣ ಸ್ವಾಮಿ

ಬಳಿಕ ಅವರು ಪುತ್ತೂರಿನ ಇತಿಹಾಸ ಪ್ರಸಿದ್ದ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕ್ಕೆ ಭೇಟಿ ನೀಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವಪ್ರಸಾದ್ ಸಚಿವರಿಗೆ ಶಾಲು ಹೊದಿಸಿ ಗೌರವಿಸಿದರು. ದೇವಳದ ಪ್ರಧಾನ ಅರ್ಚಕ ಪ್ರಾರ್ಥಿಸಿ ಪ್ರಸಾದ ವಿತರಿಸಿದರು. ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ್ ನಾರಾವಿ, ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ,ಭಾಮಿ ಜಗದೀಶ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು.

Ad Widget

Ad Widget
Click to comment

Leave a Reply

ಕಾರ್ಯಕ್ರಮಗಳು

Akshaya Tritiya-ಅಕ್ಷಯ ತೃತೀಯ ಪ್ರಯುಕ್ತ ನೂಕುನುಗ್ಗಲು ತಪ್ಪಿಸಲು ಜಿ.ಎಲ್‌. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಮುಂಗಡ ಬುಕ್ಕಿಂಗ್ ಆಫರ್

Ad Widget

Ad Widget

Ad Widget

Ad Widget Ad Widget

ಅಕ್ಷಯ ತೃತೀಯ ಹಿಂದೂಗಳ ಜನಪ್ರೀಯ ಹಬ್ಬವಾಗಿದ್ದು ಇದಕ್ಕೆ ವಿಶೇಷವಾದ ಮಹತ್ವವಿದೆ. ಈ ವಿಶೇಷ ದಿನದಂದು ಮೌಲ್ಯಯುತವಾದ ಅಥವಾ ಅಮೂಲ್ಯವಾದ ವಸ್ತುಗಳನ್ನು ಖರೀದಿಸಲು ಪ್ರಶಸ್ತ ಕಾಲವೆಂದು ಶಾಸ್ತ್ರ ಪುರಾಣಗಳಲ್ಲಿ ಉಲ್ಲೇಖವಾಗಿದೆ. ಅಕ್ಷಯ ತೃತೀಯ ಶುಭ ಸಂದರ್ಭದಲ್ಲಿ ಚಿನ್ನವನ್ನು ಖರೀದಿಸಿದರೆ ನಮ್ಮ ಬದುಕು ಬಂಗಾರದಂತೆ ಹಸನಾಗುತ್ತದೆ ಎಂಬ ನಂಬಿಕೆ ತಲೆತಲಾಂತರಗಳಿಂದ ಭಾರತೀಯರಲ್ಲಿ ಮೂಡಿ ಬಂದಿದೆ. ನಮ್ಮ ಜೀವನಕ್ಕೊಂದು ಭದ್ರತೆಯನ್ನು ಮತ್ತು ಸೌಂದರ್ಯಕ್ಕೊಂದು ಗಂಭೀರತೆಯನ್ನು ಒದಗಿಸುವಲ್ಲಿ ಬಂಗಾರ ಪ್ರಮುಖ ಪಾತ್ರವನ್ನು ವಹಿಸುತ್ತದೆ.

Ad Widget

Ad Widget

Ad Widget

Ad Widget

Ad Widget

ಚಿನ್ನಾಭರಣ ಮಳಿಗೆಗಳು ಅಕ್ಷಯ ತೃತೀಯ ದಿನದಂದು ಚಿನ್ನಾಭರಣ ಖರೀದಿಯಲ್ಲಿ ಉಂಟಾಗಬಹುದಾದ ನೂಕುನುಗ್ಗಲನ್ನು ತಪ್ಪಿಸಲು ಮುಂಗಡ ಬುಕ್ಕಿಂಗ್ ವ್ಯವಸ್ಥೆಯನ್ನು ಮಾಡುತ್ತಿರುವುದನ್ನು ಇತ್ತೀಚಿನ ದಿನಗಳಲ್ಲಿ ನಾವು ಕಾಣುತ್ತಿದ್ದೇವೆ.

Ad Widget

Ad Widget

ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆಯಾದ ಜಿ.ಎಲ್‌. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಗ್ರಾಹಕರಿಗೆ ಅಕ್ಷಯ ತೃತೀಯ ಪ್ರಯುಕ್ತ ಮುಂಗಡ ಬುಕ್ಕಿಂಗ್ ಆಫರ್ ಏ. 20ರಿಂದ ಮೇ 09ರವರೆಗೆ ಲಭ್ಯವಿದೆ. ಈ ಆಫರ್ ಜಿ.ಎಲ್‌.ಆಚಾರ್ಯ ಜ್ಯುವೆಲ್ಲರ್ಸ್ ನ ಪುತ್ತೂರು, ಮೂಡಬಿದ್ರೆ, ಸುಳ್ಯ, ಕುಶಾಲನಗರ ಹಾಗೂ ಹಾಸನ ಮಳಿಗೆಗಳಲ್ಲಿ ಲಭ್ಯವಿದೆ.

Ad Widget

Ad Widget

ಅಕ್ಷಯ ತೃತೀಯ ಎಂಬುವುದು ಶುಭದ ಸಂಕೇತವಾಗಿದೆ. ಸಂಸ್ಕೃತದಲ್ಲಿ ಅಕ್ಷಯ ಎಂದರೆ ಶಾಶ್ವತ ಎಂದರ್ಥ. ಈ ಸಂದರ್ಭದಲ್ಲಿ ಜನರು ಚಿನ್ನ ಬೆಳ್ಳಿಯಂತಹ ಅಮೂಲ್ಯ ಲೋಹಗಳನ್ನು ಖರೀದಿಸುತ್ತಾರೆ ಏಕೆಂದರೆ ಇದು ಕುಟುಂಬಕ್ಕೆ ಸಮೃದ್ಧಿ ಮತ್ತು ಆದೃಷ್ಟವನ್ನು ತರುತ್ತದೆ ಎಂಬುದು ನಂಬಿಕೆ. ಆದುದರಿಂದ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ತಮ್ಮೆಲ್ಲ ನೆಚ್ಚಿನ ಗ್ರಾಹಕರಿಗೆ ಅಕ್ಷಯ ತೃತೀಯ ಪ್ರಯುಕ್ತ ಮುಂಗಡ ಬುಕ್ಕಿಂಗ್ ಆಫರ್, ಮದುವೆ ಆಭರಣಗಳ ಖರೀದಿಗೆ ವಿಶೇಷ ರಿಯಾಯಿತಿ ಹಾಗೂ ಗ್ರಾಹಕರಿಗೆ ತಮ್ಮ ಮೆಚ್ಚಿನ ಆಭರಣಗಳನ್ನು ಆಯ್ಕೆ ಮಾಡಿ ಚಿನ್ನದ ನಾಣ್ಯವನ್ನು ಗೆಲ್ಲುವ ಸುವರ್ಣವಕಾಶ ಕಲ್ಪಿಸಿದೆ.

Ad Widget

Ad Widget

1957ರಲ್ಲಿ ಪುತ್ತೂರಿನ ಪುಣ್ಯ ನೆಲದಲ್ಲಿ ಆರಂಭಗೊಂಡ ಸಂಸ್ಥೆಯು ಆಭರಣಗಳ ಮಾರಾಟದಲ್ಲಿ ತನ್ನದೇ ಛಾಪು ಮೂಡಿಸಿದೆ. ವಿಶ್ವಾಸ, ಪರಿಶುದ್ಧತೆ, ಪರಂಪರೆ, ವಿನ್ಯಾಸ ಹಾಗೂ ಗ್ರಾಹಕ ಸೇವೆಗಳಿಗೆ ಸಂಸ್ಥೆ ಮನೆಮಾತಾಗಿದೆ. ಆಂಟಿಕ್ ಆಭರಣಗಳು, ಅನ್ ಕಟ್ ಡೈಮಂಡ್ಸ್ ಹಾಗೂ ಅಮೂಲ್ಯ ಹರಳುಗಳು, ಲೈಟ್ರೈಟ್ ಆಭರಣಗಳ ವಿಶೇಷ ಸಂಗ್ರಹವಿದ್ದು ಗ್ರಾಹಕರು ಆರಾಮದಾಯಕವಾಗಿ ಶಾಪಿಂಗ್ ಮಾಡಲು ಉತ್ತಮ ಪಾರ್ಕಿಂಗ್ ವ್ಯವಸ್ಥೆ ಕೂಡಾ ಲಭ್ಯವಿದೆ.

ಆಧುನಿಕ ಮತ್ತು ಪಾರಂಪರಿಕ ಚಿನ್ನದ ಆಭರಣಗಳು, ವಜ್ರಾಭರಣಗಳಿಗೆ ಹಾಗೂ ಗುಣಮಟ್ಟದ ಚಿನ್ನಾಭರಣಗಳ ಮಾರಾಟದಲ್ಲಿ ಹೆಸರುವಾಸಿಯಾಗಿರುವ ಸಂಸ್ಥೆಯು ಮೂಡಬಿದ್ರೆ, ಸುಳ್ಯ, ಕುಶಾಲನಗರ ಹಾಗೂ ಹಾಸನದಲ್ಲಿ ತಮ್ಮ ಮಳಿಗೆಗಳನ್ನು ಹೊಂದಿದೆ.

Continue Reading

ಸ್ಥಳೀಯ

Cattle Fair-ಜಾನುವಾರು ಜಾತ್ರೆಗೆ ಪ್ರಸಿದ್ದಿ ಪಡೆದ ಕುಲ್ಕುಂದದ ’ಬಸವನಮೂಲ’ ಬಸವೇಶ್ವರ ದೇವಸ್ಥಾನದಲ್ಲಿ ಶಿವನ ಪ್ರೀತ್ಯರ್ಥ ಸಾಮೂಹಿಕ ಅತಿರುದ್ರ ಮಹಾಯಾಗ – ಸಾಕ್ಷಾತ್ ಮಹಾದೇವನೇ ನಂದಿ ರೂಪದಲ್ಲಿ ಒಲಿದ ಸ್ಥಳದಲ್ಲಿ ಅಪರೂಪದ ಸಂಕಲ್ಪಕ್ಕೆ ಸಿದ್ಧತೆ; ಆನ್ಲೈನ್ ನೋಂದಣಿಗೂ ಅವಕಾಶ

Ad Widget

Ad Widget

Ad Widget

Ad Widget Ad Widget

ಅದು ಜಗತ್ತಿನ ಬೇರೆಲ್ಲೂ ಇಲ್ಲದ ಅತ್ಯಂತ ಅಪರೂಪದ ಮಹಾಶಿವನ ಆಲಯ. ಹಣೆಯ ಮೇಲೆ ಶಿವಲಿಂಗವನ್ನು ಹೊತ್ತ ನಂದಿಯ ರೂಪದ ವಿಗ್ರಹಕ್ಕೆ ಆರಾಧನೆ ನಡೆಯುವ ಏಕೈಕ ದೇವಸ್ಥಾನ. ಅರ್ಥಾತ್ ಬಸವನ ರೂಪದ ಮಹಾದೇವನೇ ಅಲ್ಲಿನ ಆರಾಧ್ಯ ಮೂರ್ತಿ. ಸುಮಾರು 800 ವರ್ಷಗಳ ಪ್ರಾಚೀನ ಇತಿಹಾಸವುಳ್ಳ, ಪಶ್ಚಿಮ ಘಟ್ಟದ ತಪ್ಪಲಿನ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಬಳಿಯ ಕುಲ್ಕುಂದ ‘’ಬಸವನಮೂಲ’’ ಎಂದೇ ಪ್ರಸಿದ್ಧಿಯಾಗಿರುವ ಬಸವೇಶ್ವರ ದೇವಸ್ಥಾನದಲ್ಲಿ ಶಿವನಿಗೆ ಅತಿ ಪ್ರಿಯ ಎನ್ನಲಾದ ಸಾಮೂಹಿಕ ಅತಿರುದ್ರ ಮಹಾಯಾಗ ನಡೆಸಲು ನಿಶ್ಚಯಿಸಲಾಗಿದೆ.

Ad Widget

Ad Widget

Ad Widget

Ad Widget

Ad Widget

ತಾರಕಾಸುರನ ವಧೆಗಾಗಿ ಸುಬ್ರಹ್ಮಣ್ಯ ಸ್ವಾಮಿ ಮಹಾದೇವನ ಕುರಿತು ತಪಸ್ಸು ಮಾಡಿದಾಗ, ಸಾಕ್ಷಾತ್ ಮಹಾದೇವನೇ ನಂದಿ ರೂಪದಲ್ಲಿ ಒಲಿದ ಸ್ಥಳ ಇದು ಎನ್ನುವುದು ಇಲ್ಲಿನ ಐತಿಹ್ಯ. ಅರಣ್ಯ ಮಧ್ಯದ ಇಂತಹ ಅದ್ಭುತ ಪ್ರದೇಶದಲ್ಲಿ ಲೋಕಕಲ್ಯಾಣ ಸಲುವಾಗಿ ವಿಶೇಷ ರೀತಿಯ ಅತಿರುದ್ರ ಯಾಗ ನಡೆಸಲು ಭಗವದ್ಬಕ್ತರು ಸೇರಿ ಸಂಕಲ್ಪಿಸಿದ್ದಾರೆ. ಲಕ್ಷಕ್ಕೂ ಹೆಚ್ಚು ಮಂದಿ ಸಂಕಲ್ಪದ ಮೂಲಕ ಅತಿರುದ್ರ ಮಹಾಯಾಗ ನಡೆಸಬೇಕೆಂದು ನಿಶ್ಚಯಿಸಿದ್ದು, ಇದಕ್ಕಾಗಿ ಸಾಮೂಹಿಕ ಸಹಭಾಗಿತ್ವಕ್ಕೆ ಯೋಜನೆ ಹಮ್ಮಿಕೊಳ್ಳಲಾಗಿದೆ.

Ad Widget

Ad Widget

ಆನ್ಲೈನ್ ನೋಂದಣಿಗೆ ಅವಕಾಶ

Ad Widget

Ad Widget

ಅತಿರುದ್ರ ಮಹಾಯಾಗವನ್ನು ಹಣ ಇದ್ದವರು ಮಾತ್ರ ಕೈಗೊಳ್ಳಲು ಸಾಧ್ಯ. ಜನಸಾಮಾನ್ಯರಿಗೂ ಅತಿರುದ್ರ ಮಹಾಯಾಗದ ಪ್ರಸಾದ ಸಿಗಬೇಕು ಮತ್ತು ಶಿವನ ಅನುಗ್ರಹ ಲಭಿಸಬೇಕೆಂದು ಬಸವನಮೂಲ ಬಸವೇಶ್ವರ ದೇವಸ್ಥಾನದಲ್ಲಿ 2025ರ ನವೆಂಬರ್ 17ರಂದು ಅತಿರುದ್ರ ಮಹಾಯಾಗ ನಡೆಸಲಾಗುತ್ತಿದ್ದು, ಬಡವ, ಬಲ್ಲಿದರೆಲ್ಲರೂ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಅತಿರುದ್ರ ಮಹಾಯಾಗ ಮಾಡುವ ಪ್ರತಿಯೊಬ್ಬ ಭಕ್ತನ ಹೆಸರಿನಲ್ಲಿಯೂ ರುದ್ರಾಕ್ಷಿಯನ್ನು ಸಂಕಲ್ಪಿಸಿ ಭಕ್ತರ ವಿಳಾಸಕ್ಕೆ ಕಳುಹಿಸಿಕೊಡಲಾಗುವುದು. ಅತಿ ಹೆಚ್ಚು ಜನರು ಸೇರಬೇಕು ಮತ್ತು ಸರ್ವರಿಗೂ ಶಿವನ ಅನುಗ್ರಹ ಲಭಿಸುವ ದೃಷ್ಟಿಯಿಂದ ಅತಿರುದ್ರ ಯಾಗ ಸೇವೆಗೆ ಕೇವಲ ರೂ. 353 ನಿಗದಿ ಪಡಿಸಲಾಗಿದ್ದು, ಆನ್ಲೈನ್ / ವಾಟ್ಸಪ್ ಮೂಲಕವೂ ನೋಂದಣಿಗೆ ಅವಕಾಶ ಇದೆ.

Ad Widget

Ad Widget

ಇದೇ ಮೇ 6ರಂದು ಸಂಕಲ್ಪ ಆರಂಭ
ಆರಂಭಿಕವಾಗಿ ಯಾಗ ನೋಂದಣಿ ನೆರವೇರಿಸುವ 14,641 ಭಕ್ತರ ಹೆಸರಲ್ಲಿ ಇದೇ ಮೇ 6ರಂದು ಬಸವನಮೂಲ ಬಸವೇಶ್ವರ ಕ್ಷೇತ್ರದಲ್ಲಿ ಯಾಗ ಸಂಕಲ್ಪ ನೆರವೇರಲಿದ್ದು, ಅಷ್ಟೂ ಮಂದಿ ಇಚ್ಛಿಸಿದಲ್ಲಿ ಕ್ಷೇತ್ರದಲ್ಲಿ ಸಾಮೂಹಿಕ ಸಂಕಲ್ಪ ಕೈಗೊಳ್ಳಲು ಅವಕಾಶ ಮಾಡಲಾಗಿದೆ. ಅತಿರುದ್ರ ಯಾಗ ನಡೆಸುವುದಕ್ಕೂ ಮುನ್ನ ಮಹಾರುದ್ರ ಯಾಗವನ್ನು ಇದೇ ಕಾರ್ತಿಕ ಮಾಸದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಅತಿರುದ್ರ ಮಹಾಯಾಗ ಅತ್ಯಂತ ಅಪರೂಪದ ಕೈಂಕರ್ಯವಾಗಿದ್ದು, ಯಾಗಕ್ಕೆ ನೋಂದಾಯಿಸಿದ ಭಕ್ತರ ಹೆಸರಲ್ಲಿ ಬೆಳಗ್ಗೆ ಎಂಟು ಗಂಟೆಗೆ ಸಂಕಲ್ಪ ನೆರವೇರಲಿದೆ. ಇದನ್ನು ಯೌಟ್ಯೂಬ್ ಲೈವ್ ಮುಖಾಂತರ ಪ್ರತಿಯೊಬ್ಬರಿಗೂ ನೋಡುವ ವ್ಯವಸ್ಥೆ ಮಾಡಲಾಗಿದೆ. ದೂರದ ಊರಿನಲ್ಲಿ ಇರುವ ಭಕ್ತರೂ ಈ ಸೇವೆ ಮಾಡಬಹುದಾಗಿದ್ದು, ಆನ್ಲೈನಲ್ಲಿ ನೋಂದಣಿ ಮಾಡಿದವರಿಗೆ ಯಾಗದ ಪ್ರಸಾದರೂಪವಾಗಿ ರುದ್ರಾಕ್ಷಿ, ರಕ್ಷೆ ಮತ್ತು ಭಸ್ಮವನ್ನು ಪೋಸ್ಟ್ ಮೂಲಕ ತಲುಪಿಸಲಾಗುವುದು. ಶಿವನ ಪ್ರೀತ್ಯರ್ಥ ಮೊದಲ ಬಾರಿಗೆ ಅತಿರುದ್ರ ಮಹಾಯಾಗ ನೆರವೇರಲಿದ್ದು, ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ವ್ಯವಸ್ಥೆ ಮಾಡಲಾಗುತ್ತಿದೆ.

ಆನ್ಲೈನ್ ನೋಂದಣಿ ಮಾಡಿಕೊಳ್ಳಲು ಈ ಲಿಂಕ್ https://zfrmz.com/kjITqzcjpoyBbRLIVS4w ಬಳಸಬಹುದು.

Continue Reading

ಕಾರ್ಯಕ್ರಮಗಳು

Ambika Vidyalaya-ಅಂಬಿಕಾ ವಿದ್ಯಾಲಯದಲ್ಲಿ ಶೃಂಗೇರಿ ಜಗದ್ಗುರುಗಳ ಸಾರ್ವಜನಿಕ ಗುರುವಂದನೆ ಮತ್ತು ದಶಾಂಬಿಕೋತ್ಸವ ಸಮಾರೋಪ ಸಮಾರಂಭ

Ad Widget

Ad Widget

Ad Widget

Ad Widget Ad Widget

ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಪುತ್ತೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಅಂಬಿಕಾ ವಿದ್ಯಾಲಯ (ಸಿಬಿಎಸ್‌ಇ) ತನ್ನ ಸ್ಥಾಪನೆಯ ದಶಮಾನೋತ್ಸವವನ್ನು ವರ್ಷಪೂರ್ತಿ ನಾನಾ ಕಾರ್ಯಕ್ರಮಗಳ ಮೂಲಕ ದಶಾಂಬಿಕೋತ್ಸವ ಹೆಸರಿನಲ್ಲಿ ಆಚರಿಸಿದೆ. ಇದರ ಸಮಾರೋಪ ಸಮಾರಂಭ ಏ. 25ರಂದು ಪುತ್ತೂರು ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಕ್ಯಾಂಪಸ್‌ನ ಶ್ರೀ ಶಂಕರ ಸಭಾಭವನದಲ್ಲಿ ನಡೆಯಲಿದೆ.

Ad Widget

Ad Widget

Ad Widget

Ad Widget

Ad Widget

ಕಾರ್ಯಕ್ರಮದಲ್ಲಿ ಶ್ರೀ ಶೃಂಗೇರಿ ಪೀಠದ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರು ಭಾಗವಹಿಸಲಿದ್ದಾರೆ. ಇದೇ ವೇಳೆ ಪೂಜ್ಯ ಸ್ವಾಮೀಜಿಯವರಿಗೆ ಸಾರ್ವಜನಿಕ ಗುರುವಂದನಾ ಕಾರ್ಯಕ್ರಮ ನಡೆಯಲಿದೆ.

Ad Widget

Ad Widget

ಶ್ರೀಮಜ್ಜಗದ್ಗುರು ಅಭಿವಂದನಾ ಸಮಿತಿ ಮತ್ತು ಅಂಬಿಕಾ ವಿದ್ಯಾಲಯದ ಸಂಚಾಲಕರಾದ ಸುಬ್ರಹ್ಮಣ್ಯ ನಟ್ಟೋಜ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಶೃಂಗೇರಿ ಕ್ಷೇತ್ರಕ್ಕೂ ಅಂಬಿಕಾ ವಿದ್ಯಾಸಂಸ್ಥೆಗಳಿಗೂ ಅವಿನಾಭಾವ ಸಂಬಂಧವಿದೆ. ಅಂಬಿಕಾ ವಿದ್ಯಾಲಯದ ನಾಮಫಲಕವನ್ನು ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾ ಸ್ವಾಮೀಜಿ ಅವರು 2014ರಲ್ಲಿ ಅನಾವರಣಗೊಳಿಸಿದ್ದರು. 2016ರಲ್ಲಿ ಶ್ರೀಗಳು ತಮ್ಮ ಉತ್ತರಾಧಿಕಾರಿ ಶಿಷ್ಯರಾದ ಶ್ರೀ ಶ್ರೀ ವಿಧುಶೇಖರ ಭಾರತೀ ಶ್ರೀಗಳ ಜತೆಗೂಡಿ ಪುತ್ತೂರಿಗೆ ಆಗಮಿಸಿ ವಸತಿಯುತ ಅಂಬಿಕಾ ಪ.ಪೂ. ವಿದ್ಯಾಲಯ ಲೋಕಾರ್ಪಣೆಗೊಳಿಸಿದ್ದರು. 2019ರಲ್ಲಿ ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರು ಅಂಬಿಕಾ ಮಹಾವಿದ್ಯಾಲಯವನ್ನು ಬಪ್ಪಳಿಗೆಯಲ್ಲಿ ಲೋಕಾರ್ಪಣೆ ಮಾಡಿದ್ದರು. 2021ರಲ್ಲಿ ಅಂಬಿಕಾ ವಿದ್ಯಾಲಯಕ್ಕೆ ಸಿಬಿಎಸ್‌ಇ ಮಾನ್ಯತೆ ದೊರಕಿದಾಗ ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರು ಶೃಂಗೇರಿಯಲ್ಲಿ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ನಾಮಫಲಕ ಅನಾವರಣ ಮಾಡಿದ್ದರು. ಇದೀಗ ದಶಾಂಬಿಕೋತ್ಸವ ಸಮಾರಂಭಕ್ಕೆ ಶ್ರೀಗಳು ಬರುತ್ತಿದ್ದಾರೆ ಎಂದವರು ನುಡಿದರು.

Ad Widget

Ad Widget

ಶ್ರೀ ಸರಸ್ವತೀ ಹೋಮ:
ಏ.25ರಂದು ಬೆಳಗ್ಗೆ 9 ಗಂಟೆಗೆ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ಶ್ರೀ ಸರಸ್ವತಿ ಹೋಮದ ಪೂರ್ಣಾಹುತಿ ನಡೆಯಲಿದೆ. ಇದಾದ ಬಳಿಕ ದಶಾಂಬಿಕೋತ್ಸವ ಸಮಾರಂಭ ಸಮಾರಂಭ ನಡೆಯಲಿದ್ದು, ಶ್ರೀಗಳು ಆಶೀರ್ವಚನ ನೀಡಲಿದ್ದಾರೆ. ಅಂಬಿಕಾ ಮಹಾ ವಿದ್ಯಾಲಯದ ಉಪನ್ಯಾಸಕರಾದ ತೇಜಶಂಕರ ಸೋಮಯಾಜಿ ಅಭಿನಂದನಾ ನುಡಿಗಳನ್ನಾಡಲಿದ್ದಾರೆ ಎಂದರು.

Ad Widget

Ad Widget

ಗುರುವಂದನೆ:
ಶೃಂಗೇರಿ ಜಗದ್ಗುರುಗಳ ಸಾರ್ವಜನಿಕ ಗುರುವಂದನೆ ಮತ್ತು ದಶಾಂಬಿಕೋತ್ಸವ ಸಮಾರೋಪ ಸಮಾರಂಭ ಏಕಕಾಲದಲ್ಲಿ ನಡೆಯಲಿದೆ. ಗುರುವಂದನೆಯ ಉದ್ದೇಶದಿಂದ ಹಿಂದೂ ಧರ್ಮದ ಸರ್ವ ಸಮುದಾಯಗಳ ಮುಖಂಡರನ್ನು ಒಳಗೊಂಡ ಅಭಿವಂದನಾ ಸಮಿತಿ ರಚಿಸಲಾಗಿದೆ ಎಂದು ಸುಬ್ರಹ್ಮಣ್ಯ ನಟ್ಟೋಜ ವಿವರಿಸಿದರು.
ಏ.24ರಂದು ಸಂಜೆ 6 ಗಂಟೆಗೆ ಜಗದ್ಗುರುಗಳು ಪುತ್ತೂರು ಪುರಪ್ರವೇಶ ಮಾಡಲಿದ್ದಾರೆ. ಕಬಕ ಸಮೀಪದ ಪೋಳ್ಯ ಮಠದ ಬಳಿ ಸ್ವಾಮೀಜಿಗಳಿಗೆ ಪೂರ್ಣಕುಂಭ ಸ್ವಾಗತ ಕೋರಿ, ಧೂಳೀ ಪಾದ ಪೂಜೆ ಮಾಡಲಾಗುವುದು. ಅಂದು ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದಲ್ಲಿ ಮೊಕ್ಕಾಂ ಹೂಡಲಿರುವ ಶ್ರೀಗಳು ರಾತ್ರಿ ಪಟ್ಟದ ದೇವರಾದ ಶ್ರೀ ಚಂದ್ರಮೌಳೀಶ್ವರ ಪೂಜೆ ಮಾಡಲಿದ್ದಾರೆ.

25ರಂದು ಬೆಳಗ್ಗೆ ನಡೆಯುವ ಗುರುವಂದನಾ ಕಾರ್ಯಕ್ರಮದಲ್ಲಿ ಜಗದ್ಗುರುಗಳಿಗೆ ಪಾದುಕಾ ಪೂಜೆ ಮತ್ತು ಭಿಕ್ಷಾವಂದನೆ ನಡೆಯಲಿದೆ. ಈ ಸಂದರ್ಭದಲ್ಲಿ ಭಕ್ತರು ಶ್ರೀಗಳಿಗೆ ಪಾದುಕಾ ಪೂಜೆ ಸಲ್ಲಿಸಲು ಅವಕಾಶವಿದೆ. ಆಸಕ್ತರು ಮುಂಚಿತವಾಗಿಯೇ ಅಭಿವಂದನಾ ಸಮಿತಿಯನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಕಾರ್ಯಕ್ರಮ ಬಳಿಕ ಶ್ರೀಗಳು ಮಂತ್ರಾಕ್ಷತೆ ನೀಡಲಿದ್ದು, ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀಮಜ್ಜಗದ್ಗುರು ಅಭಿವಂದನಾ ಸಮಿತಿಯ ಅಧ್ಯಕ್ಷರಾದ ಶಶಾಂಕ್ ಕೊಟೇಚಾ, ಪ್ರಧಾನ ಕಾರ್ಯದರ್ಶಿ ಬಿ. ಐತ್ತಪ್ಪ ನಾಯ್ಕ್ö, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಬೋರ್ಕರ್, ಅಂಬಿಕಾ ವಿದ್ಯಾಲಯ ಪ್ರಿನ್ಸಿಪಾಲ್ ಮಾಲತಿ ಡಿ., ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷರಾದ ಸೀಮಾ ನಾಗರಾಜ್ ಉಪಸ್ಥಿತರಿದ್ದರು.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading