ಪುತ್ತೂರು : ಅ 4: ಕರಾವಳಿ ಕರ್ನಾಟಕದಲ್ಲಿ ಹೆಚ್ಚಾಗಿ ಬೆಳೆಯಲಾಗುವ ಪ್ರಮುಖ ತೋಟಗಾರಿಕಾ ಬೆಳೆಯಾದ ಬಿಳಿ ಆಡಿಕೆ ಅಥಾವ ಗೊಟಡಿಕೆಗೆ (ಚಾಲಿ ಅಡಿಕೆ) ಈಗ ಚಿನ್ನದ ಧಾರಣೆ . ಗಣೇಶ ಚತುರ್ಥಿ ಹಬ್ಬದ ಅಸುಪಾಸಿನಲ್ಲಿ ಎಲ್ಲ ಮೂರು ಮಾದರಿಯ ಅಡಿಕೆಯ ರೇಟ್ 500 ರ ಗಡಿ ದಾಟಿತು . ಸದ್ಯ ಅಡಿಕೆ ಧಾರಣೆ ಸ್ಥಿರವಾಗಿದ್ದೂ, ರೂ 500 ರ ಅಸುಪಾಸಿನಲ್ಲಿ ಗಿರಕಿ ಹೊಡೆಯುತ್ತಿದೆ. ಈ ರೇಟ್ ಆಡಿಕೆ ಬೆಳೆಗಾರರ ಮಂದಹಾಸಕ್ಕೂ ಕಾರಣವಾಗಿದೆ.
ಕೊರೊನಾ ಹಾಗೂ ಲಾಕ್ ಡೌನ್ ಬಳಿಕ ದೇಶದ ಹಾಗೂ ಬಹುತೇಕ ಜನರ ಆರ್ಥಿಕ ಸ್ಥಿತಿ ಕುಸಿದು ಹೋಗಿದೆ. ಆದರೆ ಅಡಿಕೆ ಅದರ ಬೆಳೆಗಾರರ ಮಾನ ಉಳಿಸಿದೆ. ಇದು ಅಡಿಕೆ ಬೆಳೆಗಾರರಿಗೆ ಖುಷಿಗೆ ಕಾರಣವಾಗಿದ್ದರೇ, ಮತ್ತೂಂದಡೆ ತೋಟ ಹಾಗೂ ಅಂಗಳದಲ್ಲಿರುವ ಅಡಿಕೆಗಿಗ ಕಳ್ಳಕಾಕಾರ ಅಪಾಯ ಎದುರಾಗಿದೆ. ಧಾರಣೆ ಏರಿಕೆ ಬಳಿಕ ಅಡಿಕೆ ತೋಟಗಳಿಗೆ ಕಳ್ಳರ ಹಾವಳಿ ಹೆಚ್ಚಾಗಿದೆ. ಮೊದಲಿನಿಂದಲೂ ಅಡಿಕೆಗೆ ಕಳ್ಳರ ಭಯವಿತ್ತಾದರೂ ಈ ಬಾರಿ ಅದು ದುಪ್ಪಾಟಗಿದೆ. ಅದಕ್ಕೆ ಪ್ರಮುಖ ಕಾರಣ ಲಾಕ್ ಡೌನ್ ಬಳಿಕ ಜನರ ಬಳಿ ಹಣದ ಕೊರತೆ ಉಂಟಾಗಿರುವುದು, ಇನ್ನೊಂದು ತೋಟದಲ್ಲಿ ಅಡಿಕೆ ಹಣ್ಣಾಗುವ ಸಮಯದಲ್ಲೆ ಅದಕ್ಕೆ ಚಿನ್ನದ ಬೆಲೆ ಬಂದಿರುವುದು.
ಸೆಪ್ಟಂಬರ್ ,ಅಕ್ಟೋಬರ್ ತಿಂಗಳು ತೋಟದಲ್ಲಿರುವ ಮರಗಳಲ್ಲಿ ಅಡಿಕೆಗಳು ಹಣ್ಣಾಗುವ ಸಮಯ. ಅಕ್ಟೋಬರ್ ಅಂತ್ಯ ಅಥಾವ ನವೆಂಬರ್ ತಿಂಗಳು ಅಡಿಕೆಯ ಕೊಯಿಲಿನ ಸಮಯ. ಹಾಗಾಗಿ ಈಗ ತೋಟದಲ್ಲಿ ಸಾಧಾರಣ ಬಲಿತ ಹಾಗೂ ಒಂದಷ್ಟು ಹಣ್ಣಾಗಿರುವ ಅಡಿಕೆಗಳು ಮರದ ಗೊಂಚಲಿನಲ್ಲಿರುತ್ತಾದೆ . ಇದನ್ನೆ ಟಾರ್ಗೆಟ್ ಮಾಡುತ್ತಿರುವ ಕಳ್ಳರು ಮಧ್ಯರಾತ್ರಿ ವೇಳೆ ರೈತರು ನಿದ್ರೆಗೆ ಜಾರಿರುವ ಸಂದರ್ಭ ಸಿಕ್ಕಷ್ಟು ಬಾಚಿ ಕದಿಯುತ್ತಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ ಕಡಬ ಬೆಳ್ತಂಗಡಿ ತಾಲೂಕುಗಳಲ್ಲಿ ವರದಿಯಾಗುತ್ತಿದೆ.
ಪುತ್ತೂರು ತಾಲೂಕಿನ ಕೆದಿಲ ಪರಿಸರದಲ್ಲಿ ವ್ಯಾಪಕವಾಗಿ ಅಡಿಕೆ ಕಳ್ಳತನಗಳು ವರದಿಯಾಗುತ್ತಿದ್ದು ಅಂಗಳದಲ್ಲಿ ಒಣಗಲು ಹಾಕಿದ ಹಣ್ಣು ಅಡಿಕೆಗಳನ್ನು ಕದ್ದೊಯ್ದ ಘಟನೆಗಳು ನಡೆದಿದೆ. ಈ ಬಗ್ಗೆ ಕೆದಿಲ ಶಾಲಾ ಬಳಿಯ ವ್ಯಕ್ತಿಯೊಬ್ಬರು ಠಾಣೆಗೆ ದೂರು ನೀಡಿದ್ದಾರೆ. ಇನ್ನೂ ಬನ್ನೂರು ಗ್ರಾಮದ ಒಂದು ಮನೆಯ ತೋಟದಿಂದ ಮಧ್ಯರಾತ್ರಿ ಕಳವಿಗೆ ಮೂರು ನಾಲ್ಕು ಜನರ ತಂಡವೊಂದು ಪ್ರಯತ್ನಿಸಿದೆ. ಎಚ್ಚರವಾದ ತೋಟದ ಯಜಮಾನರು ಲೈಟ್ ಹಾಕಿದ್ದು ಈ ವೇಳೆ ಕಳ್ಳರ ತಂಡ ಅಲ್ಲಿಂದ ಪರಾರಿಯಾಗಿದೆ. ಈ ಮಧ್ಯೆ ಆ ತೋಟದ ಯಜಮಾನರು ಕಳ್ಳರು ಮಾತನಾಡುತಿದ್ದ ಶೈಲಿ ಹಾಗೂ ಅವರ ಮುಖ ಹಾಗೂ ದೇಹಾಕೃತಿಯನ್ನು ಗಮನಿಸಿದ್ದಾರೆ. ಅವರು ಹೇಳುವ ಪ್ರಕಾರ ಕಳ್ಳರು ಸ್ಥಳೀಯ ನಿವಾಸಿಗಳಲ್ಲ. ಈ ಜಿಲ್ಲೆಯವರೇ ಅಲ್ಲ, ಬೇರೆ ಜಿಲ್ಲೆಯವರು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಇದೇ ರೀತಿಯ ಘಟನೆಗಳು ಹಲವು ಕಡೆ ನಡೆದಿದ್ದು, ಕೆಲವು ಕಡೇ ಹಿಂದಿ, ಕನ್ನಡ, ಕೆಲವು ಕಡೆ ಇಲ್ಲಿಯ ಜನರಿಗೆ ಪರಿಚಿತವಲ್ಲದ ಭಾಷೆಯಲ್ಲಿ ಮಾತನಾಡುವವರು ಕಳ್ಳತನದಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ.

ಹೀಗಾಗಿ ಜಿಲ್ಲೆಯಲ್ಲಿ ಹಲವಾರು ಅಡಿಕೆ ಕಳ್ಳರ ತಂಡಗಳು ಕಾರ್ಯಚರಿಸುತ್ತಿದೆ . ಇದರಲ್ಲಿ ಅಂತರ್ಜಿಲ್ಲಾ ಹಾಗೂ ಅಂತರರಾಜ್ಯ ತಂಡಗಳು ಭಾಗಿಯಾಗಿರುವ ಶಂಕೆ ಇದೆ. ಅಥಾವ ಒಂದೇ ತಂಡ ಹಲವಾರು ಗುಂಪುಗಳನ್ನು ರಚಿಸಿ ಕೃತ್ಯ ಎಸಗುತ್ತಿದೆ ಎಂಬ ಅನುಮಾನವನ್ನು ಅಡಿಕೆ ಬೆಳೆಗಾರರು ವ್ಯಕ್ತಪಡಿಸುತ್ತಿದ್ದಾರೆ.
ಮಧ್ಯರಾತ್ರಿ 12 ಗಂಟೆ ಯಿಂದ ನಸುಕಿನ ಜಾವ 4 ಗಂಟೆಯ ಮಧ್ಯೆ ಸಕ್ರಿಯವಾಗುವ ಈ ಕಳ್ಳರ ತಂಡ ರೈತರು ಗಾಢ ನಿದ್ರೆಯಲ್ಲಿರುವ ಸಮಯವನ್ನೆ ತಮ್ಮ ಕುಕೃತ್ಯಕ್ಕೆ ಬಳಸುತ್ತಿದ್ದಾರೆ. ಹೀಗಾಗಿ ಪೊಲೀಸರು ಈ ವೇಳೆ ಗಸ್ತು ತಿರುಗಬೇಕು ರಾತ್ರಿ ವೇಳೆ ತಿರುಗಾಡುವ ವಾಹನಗಳನ್ನು ವ್ಯಕ್ತಿಗಳನ್ನು ಕೂಲಂಕುಶವಾಗಿ ಪರಿಶೀಲನೆ ಮಾಡಬೇಕು ಎಂಬ ಒತ್ತಾಯವನ್ನು ಅಡಿಕೆ ಬೆಳೆಗಾರರು ಮಾಡುತ್ತಿದ್ದಾರೆ.