ಉಳ್ಳಾಲ:ದೇಶದೆಲ್ಲೆಡೆ ರಾಷ್ಟ್ರಪಿತ ಮಹಾತ್ಮಗಾಂಧಿಯವರ ಜಯಂತಿ ಆಚರಣೆಸಂಭ್ರಮದಲ್ಲಿರುವಾಗ ಯುವಕನೊಬ್ಬ ಗಾಂಧೀಜಿ ಯುವತಿಯೊಂದಿಗೆ ತುಳುಭಾಷೆಯ ಸಜ್ಜಿಗೆ, ಬಜಿಲ್ ಎಂಬ ಹಾಡಿಗೆ ಹೆಜ್ಜೆ ಹಾಕಿದ ವೀಡಿಯೊವನ್ನು ಮೊಬೈಲ್ ಸ್ಟೇಟಸ್ ಹಾಕಿ ವಿಕೃತಿ ಮೆರೆದಿದ್ದು, ಯುವಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೊಣಾಜೆ ಠಾಣೆಗೆ ಡಿವೈಎಫ್‌ಐ ದೂರು ನೀಡಿದೆ.
ಹರೇಕಳ ಗ್ರಾಮದ ಪ್ರಜ್ವಲ್ ಎಂಬಾತ ವಾಟ್ಸಾಪ್ ನಲ್ಲಿ, ಗಾಂಧೀಜಿ ವೇಷಧಾರಿಯೊಬ್ಬಪಾಶ್ಚಿಮಾತ್ಯ ರಾಷ್ಟ್ರದ ಯುವತಿಯೊಬ್ಬಳ ತೆ ಸಜ್ಜಿಗೆ, ಬಜಿಲ್ ಎಂಬ ಹಾಡಿಗೆ ಹೆಜ್ಜೆ ಹಾಕಿರುವ ಎಡಿಟೆಡ್ ವೀಡಿಯೋವನ್ನ ಹರಿಯಬಿಟ್ಟು ವಿಕೃತಿ ಮೆರೆದಿರುವುದಾಗಿ ಡಿವೈಎಫ್‌ಐ ಘಟನೆ ದೂರಿನಲ್ಲಿ ಆರೋಪಿಸಿದೆ.
ಬ್ರಿಟೀಷರ ಆಳ್ವಿಕೆಯ ವಿರುದ್ಧ ನಿಸ್ವಾರ್ಥವಾಗಿ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತಮಹಾತ್ಮ ಗಾಂಧೀಜಿಯನ್ನು ಅವರ ಜನ್ಮ ದಿನದಂದೇ ಅವಮಾನಿಸಿರುವ ಪ್ರಜ್ವಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಗಾಂಧೀಜಿಯನ್ನು ಅವಮಾನಿಸಿದನೆಂದರೆ ದೇಶವನ್ನೇ ಅವಮಾನಿಸಿದಂತೆ.ಹಾಗಾಗಿ ತಪ್ಪಿತಸ್ಥನವಿರುದ್ದ ಕಠಿಣಕ್ರಮಕೈಗೊಳ್ಳಬೇಕು. ತಪ್ಪಿದಲ್ಲಿ ಉಗ್ರ ರಾಟ ನಡೆಸುವುದಾಗಿ ಡಿವೈಎಫ್‌ಐ ಎಚ್ಚರಿಸಿದೆ.

ಅವಮಾನಿಸಿದ ಟ್ರೋಲ್ ಪೇಜ್ ಗಳು
ಇದರ ಜತೆಗೆ ಕರಾವಳಿ ಮೂಲದ ಎನ್ನಲಾದ ಎರಡು ಇನ್ಸ್ಟಾಗ್ರಾಮ್ ಟ್ರೋಲ್ ಪೇಜ್ ಗಳು ಸಾಮಾಜಿಕ ತಾಣದಲ್ಲಿ ರಾಷ್ಟ್ರಪಿತ ಗಾಂಧಿ ಭಾವಚಿತ್ರವನ್ನು ದೃಶ್ಯವೊಂದಕ್ಕೆ ಜೋಡಿಸಿ ಅಶ್ಲೀಲ ಹಾಗೂ ಅಸಭ್ಯವಾಗಿ ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಇನ್ಸ್ಟಾಗ್ರಾಮ್ ಪೇಜ್ ಗಳಾದ ಟ್ರೋ ಮದರೆಂಗಿ ಮತ್ತು ಕುಡ್ಲಾ ಟ್ರೋಲ್ ಪೇಜ್ ಗಳಲ್ಲಿ ಅಶ್ಲೀಲ ನೃತ್ಯವೊಂದಕ್ಕೆ ಗಾಂದೀಜಿಯವರ ಮುಖ ಜೋಡಿಸಿ ಪೋಸ್ಟ್ ಮಾಡಲಾಗಿದೆ.ಈ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು , ಈ ಟ್ರೋಲ್ ಪೇಜ್ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.