ಕಲ್ಲಾರೆ ರಾಘವೇಂದ್ರ ಮಠದಲ್ಲಿ ಹಲವು ವರ್ಷಗಳ ಕಾಲ ಪರಿಚಾರಕರಾಗಿ ಸೇವೆ ಸಲ್ಲಿಸಿದ್ದ ರಾಮಕೃಷ್ಣ ಅಯ್ಯರ್ ( 64) ಅ.1 ರಂದು ನಿಧನ ಹೊಂದಿದ್ದರು. ಮೃತರು ಪತ್ನಿ ಸರೋಜಿನಿ ಹಾಗೂ ಕುಟುಂಬವರ್ಗದವರನ್ನು ಅಗಲಿದ್ದಾರೆ.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸುಮಾರು ಎಂಟು ವರ್ಷಗಳ ಕಾಲ ಪರಿಚಾರಕರಾಗಿ ಸೇವೆ ಸಲ್ಲಿಸಿ ಬಳಿಕ ಕಲ್ಲಾರೆ ಶ್ರೀ ರಾಘವೇಂದ್ರ ಮಠದಲ್ಲಿ ಸೇವೆ ಸಲ್ಲಿಸುತ್ತಿದ್ದರು.ವರ್ಷದ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ ಬಳಿಕ ಸೇವೆಯಿಂದ ನಿವೃತ್ತಿ ಪಡೆದುಕೊಂಡು ಮನೆಯಲ್ಲಿಯೇ ಇದ್ದರು.
ಆಗಾಗ ಅನಾರೋಗ್ಯ ಬಾಧಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಯ್ಯರ್ ಅವರಿಗೆ ಸಕ್ಕರೆ ಕಾಯಿಲೆ ಬಹಳವಾಗಿಯೇ ಕಾಡಿತ್ತು. ಕೆಲ ಸಮಯದ ಹಿಂದೆ ಕಾಲಿಗೆ ಆದ ಗಾಯ ವಾಸಿಯಾಗದೆ ಬೆರಳನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆಯಲಾಗಿತ್ತು. ಇವರು ಪುತ್ತೂರಿನ ತಾಲೂಕು ಬಲ್ನಾಡು ಗ್ರಾಮದ ಉಜುರ್ಪಾದೆ ಎಂಬಲ್ಲಿ ವಾಸವಾಗಿದ್ದರು.
