ʼಎಲೆಕ್ಟ್ರಾನಿಕ್ಸ್ ವಸ್ತು ಎಂದು ನಂಬಿಸಿ ಡ್ರಗ್ಸ್ ಕಳುಹಿಸಿ ವಿದೇಶದಲ್ಲಿ ಮಗ ಜೈಲು ಪಾಲಾಗುವಂತೆ ಮಾಡಿದ್ದಾರೆʼ – ಪುತ್ತೂರಿನ ಇಬ್ಬರು ವ್ಯಕ್ತಿಗಳ ವಿರುದ್ದ ಉಪ್ಪಿನಂಗಡಿ ಠಾಣೆಗೆ ಮಹಿಳೆ ದೂರು

WhatsApp-Image-2021-10-02-at-15.23.37
Ad Widget

Ad Widget

Ad Widget

ಎಲೆಕ್ಟ್ರಾನಿಕ್ಸ್‌ ವಸ್ತು  ವಿದೇಶಕ್ಕೆ ಸರಬರಜು  ಮಾಡುವ ಕೆಲಸ  ಎಂದು ಮಗನನ್ನು  ನಂಬಿಸಿ ಮಲೇಷ್ಯಾಕ್ಕೆ ಕಳುಹಿಸಿ ಅಲ್ಲಿ ಆತ ಜೈಲು ಪಾಲಾಗುವಂತೆ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಆ.1 ರಂದು ದೂರು ನೀಡಿದ್ದಾರೆ.

Ad Widget

ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಕಾರಿಂಜ ಮನೆ ನಿವಾಸಿ ಕಾಂತಪ್ಪ ಪೂಜಾರಿ ಅವರ ಪತ್ನಿ ಮೀನಾಕ್ಷಿ   ಎಂಬವರು ದೂರು ನೀಡಿದ ಮಹಿಳೆ. ಇವರ ಮಗ ಅಮಿತ್ ಕಾರಂಜಿ ಎಂಬಾತ ಎಂಟು ವರ್ಷಗಳ ಹಿಂದೆ ಮಲೇಷ್ಯಾಕ್ಕೆ ತೆರಳಿದವ  ಅಲ್ಲಿ ಜೈಲು ಪಾಲಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Ad Widget

Ad Widget

Ad Widget

ಪುತ್ತೂರಿನವರಾದ ಪ್ರದೀಪ್ ರೈ ಪಾಂಬಾರು  ಬೆಳ್ಳಾರೆ ಮತ್ತು ಪ್ರಖ್ಯಾತ ರೈ ರವರು ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಅಮಿತ್ ಗೆ ಮೋಸ ಮಾಡಿದ್ದಾರೆ ಎಂದು ಮೀನಾಕ್ಷಿಯವರು ಆರೋಪಿಸಿದ್ದಾರೆ. ಆರೋಪಿಗಳ  ವಿರುದ್ದ  ಉಪ್ಪಿನಂಗಡಿ ಠಾಣೆಯಲ್ಲಿ ಐಪಿಸಿ  ಕಲಂ:506 ರಡಿಯಲ್ಲಿ   ಪ್ರಕರಣ ದಾಖಲಿಸಲಾಗಿದೆ.

Ad Widget

“ ಆರೋಪಿಗಳಾದ  ಪ್ರದೀಪ್ ರೈ ಹಾಗೂ ಪ್ರಖ್ಯಾತ್ ರೈ ಅವರು ಮಲೇಷ್ಯಾಕ್ಕೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಕೊಂಡೊಯ್ಯುವ  ಕರ್ತವ್ಯಕ್ಕೆ ಅಮೀತನನ್ನು  ನಿಯೋಜಿಸಿದ್ದರು. 2013ರ ಮಾರ್ಚ್ 2ರಂದು ಆತನ ಬಳಿ ಎಲೆಕ್ಟ್ರಾನಿಕ್ ವಸ್ತು ಎಂದು ಹೇಳಿ ಮಾದಕ ದ್ರವ್ಯವನ್ನು ಪ್ಯಾಕ್ ಮಾಡಿ  ಆತನಿಗೆ ಗೊತ್ತಾಗದಂತೆ ನೀಡಿದ್ದು, ಇದರ ಅರಿವಿಲ್ಲದ ಆತ ಮಲೇಷ್ಯಾಕ್ಕೆ ಅದನ್ನು ತೆಗೆದುಕೊಂಡು ಹೋಗಿದ್ದಾನೆ.  ಅಮೀತ್  ಮಲೇಷ್ಯಾ ತಲುಪುತ್ತಿದ್ದಂತೆ ಪೊಲೀಸರು  ಆತನ ಕೈಯಲ್ಲಿದ್ದ  ವಸ್ತುಗಳನ್ನು  ತಪಾಸಣೆ ನಡೆಸಿದ್ದು  ಆ ವೇಳೆ  ಮಾದಕ ದ್ರವ್ಯ ಪತ್ತೆಯಾದ ಹಿನ್ನಲೆಯಲ್ಲಿ  ಆತನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು” ಎಂದು ದೂರಿನಲ್ಲಿ ತಿಳಿಸಲಾಗಿದೆ.

Ad Widget

Ad Widget
ಎಂಟು ವರ್ಷಗಳ ಹಿಂದಿನ ಅಮಿತ್‌ ಕಾರಂಜಿ ಪೋಟೊ

ಈ ವಿಷಯವನ್ನು ಮೀನಾಕ್ಷಿಯವರು  ಪ್ರದೀಫ್ ರೈ ಪಾಂಬಾರು ಮತ್ತು ಪ್ರಖ್ಯಾತ್ ರೈ ಎಂಬವರಿಗೆ ತಿಳಿಸಿದಾಗ ನಿಮ್ಮ ಮಗನನ್ನು ಬಿಟ್ಟು ಕೊಡಿಸುತ್ತೇವೆ. ಆದರೇ  ಈ ಬಗ್ಗೆ ಯಾರಲ್ಲಿಯೂ ಬಾಯ್ಬಿಡಬಾರದಾಗಿ ತಾಕೀತು ಮಾಡಿದ್ದರು. ಹಾಗಾಗಿ ಅಸಹಾಯಕರಾಗಿ ದೂರು ನೀಡಿರಲಿಲ್ಲ. ಆದರೆ ಇತ್ತೀಚೆಗೆ ಅಲ್ಲಿನ ನ್ಯಾಯಾಲಯ ಮಗನಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಆ ಬಳಿಕ ಮತ್ತೆ ಪ್ರಕರಣವನ್ನು ಯಾರಿಗಾದರೂ ತಿಳಿಸಿದರೆ ಮಗ ಹಾಗೂ ನಿಮ್ಮ ಜೀವ ಉಳಿಯದು ಎಂದು ಆರೋಪಿಗಳು ಬೆದರಿಕೆ ಹಾಕಿದ್ದಾರೆ. ಹಾಗೂ  ಅವರು ಮೊಬೈಲ್ ಸ್ವಿಚ್ ಆಫ್ ಮಾಡಿ ತಲೆ ಮರೆಸಿಕೊಂಡಿದ್ದಾರೆ ಎಂದು  ದೂರಿನಲ್ಲಿ ತಿಳಿಸಲಾಗಿದೆ.

ಜಾಹೀರಾತು

ಕೆಲಸದ ಹುಡುಕಾಟದಲ್ಲಿದ್ದ ಮಗನ ಮುಗ್ಧತೆಯನ್ನು ದುರುಪಯೋಗ ಪಡಿಸಿದ ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.ಅಲ್ಲದೇ ನಿರ್ದೋಷಿಯಾದ ನನ್ನ ಮಗನ ನಿರಪರಾಧಿತ್ವವನ್ನು ಮಲೇಷ್ಯಾ ಸರಕಾರಕ್ಕೆ  ತಿಳಿಸಿ ಆತನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದ್ದಾರೆ.

Leave a Reply

Recent Posts

ದೇಶದಲ್ಲಿ ಹಿಂದೂಗಳ ಶಕ್ತಿ ಹೇಗಿರಬೇಕೆಂದರೆ ಸರ್ಕಾರ ಹಿಂದೂಗಳ ಹೇಳಿಕೆಯಂತೆ ನಡೆಯಬೇಕು..! : ದೇವಸ್ಥಾನಗಳನ್ನು ಸರಕಾರಿಕರಣಗೊಳಿಸಿದಂತೆ ಮಸೀದಿಗಳನ್ನು ಏಕೆ ಮಾಡುವುದಿಲ್ಲ..? ಮಂದಿರ ಸಂಸ್ಕೃತಿ ರಕ್ಷಣೆ ಸಭೆಯಲ್ಲಿ ಚರ್ಚೆ – ಮುಂಬೈಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿನ ಭ್ರಷ್ಟಾಚಾರ ಬೆಳಕಿಗೆ ತಂದಿರುವ ಸುಪ್ರಸಿದ್ಧ ಸರ್ಜನ್ ರ ಪುಸ್ತಕ ಬಿಡುಗಡೆ

error: Content is protected !!
%d bloggers like this: