ಬಾಯಲ್ಲಿ ನಿರೂರಿಸುವ ಸಿಹಿ ತಿನಸುಗಳಿಗೆ ಪ್ರಸಿದ್ಧಿ ಪಡೆದಿರುವ ಹುಬ್ಬಳ್ಳಿಯ ಬಿಗ್ ಮಿಶ್ರಾ ಫೆಡಾದ ಪುತ್ತೂರು ಫ್ರಾಂಚೈಸಿಯೂ ಅಕ್ಟೋಬರ್ 3 ರಂದು ಸ್ಥಳಾಂತರಗೊಂಡು ಬೊಳುವಾರು ಆಕ್ಸಿಸ್ ಬ್ಯಾಂಕ್ ಮುಂಭಾಗದಲ್ಲಿ ಶುಭಾರಂಭಗೊಳ್ಳಲಿದೆ .ಈ ಹಿಂದೆ ಅದು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದ ಎ.ಎಂ. ಕಾಂಪ್ಲೆಕ್ಸ್ʼನಲ್ಲಿ ಕಾರ್ಯಚರಿಸುತಿತ್ತು.
ಗ್ರಾಹಕರಿಗೆ ಅನುಕೂಲಕರ ಖರೀದಿ ವಾತವರಣ ಸೃಷ್ಟಿಸುವ ಉದ್ದೇಶದಿಂದ ವಿಶಾಲ ಮಳಿಗೆಗೆ ಫ್ರಾಂಚೈಸಿಯೂ ಸ್ಥಳಾಂತರಗೊಳ್ಳುತ್ತಿದೆ. ಇಲ್ಲಿ ಮಿಶ್ರಾ ಫೆಡಾ ಐಟಂಗಳ ಜೊತೆಗೆ ಚಾಟ್ಸ್, ಸಾಫ್ಟ್ ಡ್ರಿಂಕ್ಸ್, ಐಸ್‌ಕ್ರೀಂ, ಕೇಕ್, ಡ್ರೈ ಫ್ರುಟ್ಸ್ ನಟ್ಸ್, ಚಾಕಲೇಟ್ ಐಟಂಗಳೂ ದೊರೆಯಲಿವೆ. 5 ಕಿ.ಮೀ. ವ್ಯಾಪ್ತಿಯಲ್ಲಿ ಹೋಮ್ ಡೆಲಿವರಿ ವ್ಯವಸ್ಥೆಯೂ ಇದೆ. ಮದುವೆ ಇನ್ನಿತರ ಶುಭ ಸಮಾರಂಭಗಳಿಗೆ ಮುಂಗಡ ಆರ್ಡರ್ ಮೇರೆಗೆ ತಲುಪಿಸುವ ವ್ಯವಸ್ಥೆ ಲಭ್ಯವಿದೆ. ಆದಿತ್ಯವಾರವೂ ಸೇರಿದಂತೆ ಪ್ರತಿದಿನ ಬೆಳಿಗ್ಗೆ 8.30 ರಿಂದ ರಾತ್ರಿ 10.30 ರವರೆಗೆ ಈ ಮಳಿಗೆ ತೆರೆದಿರುತ್ತದೆ.
ಇಲ್ಲಿ ಮಾರಾಟವಾಗುವ ಮಿಶ್ರಾ ಫೇಡಾ ಐಟಂಗಳು ಹುಬ್ಬಳ್ಳಿಯ ಫ್ಯಾಕ್ಟರಿಯಲ್ಲಿಯೇ ಉತ್ಪಾದನೆಗೊಳ್ಳುತ್ತವೆ. ಪ್ರತಿದಿನ ಸಂಜೆ ಫ್ರಾಂಚೈಸಿಗಳು ಮಾಡಿದ ಆರ್ಡರ್ ರಾತ್ರಿ ಉತ್ಪಾದನೆಗೊಂಡು ಮರುದಿನ ಬೆಳಿಗ್ಗೆ ಹೊರಟು ಸಂಜೆಯ ವೇಳೆಗೆ ಫ್ರಾಂಚೈಸಿ ತಲುಪಿ ಅಲ್ಲಿಂದ ಗ್ರಾಹಕನ ಕೈ ಸೇರುತ್ತದೆ.
