ಪುತ್ತೂರು : ಆ 2 : ಗಾಂಧಿ ವಿಚಾರ ವೇದಿಕೆ ಪುತ್ತೂರು ಘಟಕವು ರಾಷ್ಟ್ರಪಿತ ಮಹಾತ್ಮ ಗಾಂಧಿಯ ಹುಟ್ಟುಹಬ್ಬವನ್ನು ನಗರದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೂಳ್ಳುವ ಮೂಲಕ ಅರ್ಥಪೂರ್ಣ ರೀತಿಯಲ್ಲಿ ಆಚರಿಸಿದೆ.
ಪುತ್ತೂರಿನ ಹೃದಯ ಭಾಗದಲ್ಲಿರುವ ಗಾಂಧಿ ಕಟ್ಟೆಯಲ್ಲಿ ಗಾಂಧಿ ಕಟ್ಟೆ ಸಮಿತಿಯ ವತಿಯಿಂದ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು . ಅಲ್ಲಿ ಗಾಂಧಿ ಪ್ರತಿಮೆಗೆ ವೇದಿಕೆ ಅಧ್ಯಕ್ಷ ಝೆವಿಯರ್ ಡಿಸೋಜ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.
ಬಳಿಕ ಸಾರ್ವಜನಿಕರಿಂದ ಮತ್ತು ಸರ್ಕಾರದ ಇಲಾಖೆಯಿಂದ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿರುವ ಬಿರುಮಲೆ ಬೆಟ್ಟದ ಮೇಲಿರುವ ಗಾಂಧೀ ಮಂಟಪದಲ್ಲಿ ಬಿರುಮಲೆ ಅಭಿವೃದ್ಧಿ ಸಮಿತಿಯ ಜತೆಗೂಡಿ ಗಾಂಧಿಜಿಯವರ ಭಾವ ಚಿತ್ರವಿರಿಸಿ ಪುಷ್ಪಾರ್ಚನೆಯನ್ನು ವೇದಿಕೆಯ ವತಿಯಿಂದ ಮಾಡಲಾಯಿತು. ಅಲ್ಲಿ ಬಿರುಮಲೆ ಬೆಟ್ಟಕ್ಕೆ ಸ್ಥಳಾಂತರಗೊಂಡಿರುವ ಪ್ರಜ್ಞಾ ಆಶ್ರಮದ ವಿಶೇಷ ಮಕ್ಕಳ ಜತೆ ಉಪಹಾರ ಸೇವನೆಯನ್ನು ನಡೆಸಲಾಯಿತು.
ಬಿರುಮಲೆ ಬೆಟ್ಟದಲ್ಲಿ ಗಾಂಧಿ ವನವನ್ನು ರಚಿಸಬೇಕೆಂಬ ನೆಲೆಯಲ್ಲಿ ಗಿಡ ನೆಡುವ ಮೂಲಕ ಗಾಂಧಿ ಜಯಂತಿಯನ್ನು ಆಚರಿಸಲಾಯಿತು.
ಈ ಎಲ್ಲ ಕಾರ್ಯಕ್ರಮಗಳಲ್ಲಿ ಗಾಂಧಿ ವಿಚಾರ ವೇದಿಕೆ ಅಧ್ಯಕ್ಷ ಝೆವಿಯರ್ ಡಿಸೋಜ, ಮಾತೃ ಘಟಕದ ಸಂಯೋಜಕ ಭಾಗ್ಯೇಶ್ ರೈ, ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ಹಾಗೂ ಗಾಂಧಿ ವಿಚಾರ ವೇದಿಕೆಯ ಸದಸ್ಯರುಗಳು ಭಾಗವಹಿಸಿದ್ದರು.



