ಪುತ್ತೂರು : ಪ್ರತಿಷ್ಟಿತ ಕಂಪೆನಿಗಳ ಎಲ್‌ಇಡಿ ಲೈಟ್ಸ್ ಪ್ರದರ್ಶನ, ಮಾರಾಟ ಬೃಹತ್ ಮೇಳದ ಉದ್ಘಾಟನೆ

WhatsApp-Image-2021-10-01-at-17.44.47
Ad Widget

Ad Widget

Ad Widget

ಪುತ್ತೂರು: ಸೆ.30 ರಿಂದ ಅ.3 ರ ವರೆಗೆ ನಾಲ್ಕು ದಿನಗಳ ಕಾಲ ಸೌತ್‌ಕನರಾ ಡಾಟ್ ಕಾಮ್ ಇದರ ಆಶ್ರಯದಲ್ಲಿ ನಡೆಯಲಿರುವ ಎಲ್‌ಇಡಿ ಲೈಟ್ಸ್ ಪ್ರದರ್ಶನ ಹಾಗೂ ಮಾರಾಟದ ಬೃಹತ್ ಮೇಳದ ಉದ್ಘಾಟನಾ ಕಾರ್ಯಕರ್ಮವೂ ಪುತ್ತೂರು-ಸುಳ್ಯ ರಸ್ತೆಯ ಸಂತ ಫಿಲೋಮಿನಾ ಕಾಲೇಜು ಮುಂಭಾಗದಲ್ಲಿನ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿಮಿಟೆಡ್ ಬಳಿ ಸೆ .30 ರಂದು ನಡೆಯಿತು   

Ad Widget

 ಪುತ್ತೂರು ಮುಳಿಯ ಜುವೆಲ್ಸ್‌ ನ  ಸಿಎಂಡಿ ಹಾಗೂ ಪುತ್ತೂರು ಶ್ರೀ ಮಹಾಲಿ೦ಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯರವರು ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು . ಬಳಿಕ ಮಾತನಾಡಿದ ಅವರು ಕಳೆದ  ಮೂರು ವರ್ಷದಿಂದ ಪಶುಪತಿ ಶರ್ಮರವರ ನೇತ್ರತ್ವದಲ್ಲಿ ಸೌತ್‌ಕನರಾ ಸಂಸ್ಥೆಯೂ ಗುಣಮಟ್ಟದ ಸೇವೆ ನೀಡುತ್ತಿದೆ. ಐದು ಪ್ರತಿಷ್ಟಿತ ಎಲೆಕ್ಟ್ರಿಕ್‌ ಕಂಪೆನಿಗಳನ್ನೂ ಒಂದೂ ಸೂರಿನಡಿಗೆ ತರುವ ಮೂಲಕ ಸಂಸ್ಥೆಯೂ ಬಹು ಆಯ್ಕೆಯ ಅವಕಾಶವನ್ನು ನೀಡಿದೆ. ಗ್ರಾಹಕರಿಗೆ ಇಂತಹ ಮಾರಾಟ ಮೇಳಗಳಿಂದ ತಾವು ಖರೀದಿಸುವ ಉತ್ಪನ್ನಗಳಿಗೆ ಅಫರ್‌ಗಳು ಸಿಗುವ ಜತೆಗೆ ಉತ್ಪನ್ನಗಳ ಪ್ರಯೋಜನಗಳ ಬಗ್ಗೆಯೂ ಸವಿಸ್ತಾರವಾಗಿ ಮಾಹಿತಿ ಸಿಗುತ್ತದೆ. ಹಾಗಾಗಿ ಗ್ರಾಹಕರು ಈ ಮೇಳಕ್ಕೆ ಭೇಟಿ ನೀಡುವ ಮೂಲಕ ಇದರ ಉಪಯೋಗ ಪಡೆಯಬೇಕು ಎಂದು ಹೇಳಿದರು.

Ad Widget

Ad Widget

Ad Widget

ಕರ್ನಾಟಕ ರಾಜ್ಯ ಅನುಮೋದಿಸಲಾದ ಎಲೆಕ್ಟಿಕಲ್ ಕಾಂಟ್ರಾಕ್ಟರ್‌  ಅಸೋಸಿಯೇಶನ್ ಬೆಂಗಳೂರು ಇದರ ಅಧ್ಯಕ್ಷ ಹರಿಪ್ರಸಾದ್ ಪಿ.ಕೆ. ಪೇಸ್ ಅಧ್ಯಕ್ಷ ರಮೇಶ್ ಭಟ್ ಮಿತ್ತೂರು, ಕ್ಲಾಸ್-1 ಪಿಡಬ್ಲ್ಯೂಡಿ ಕಾಂಟ್ರಾಕ್ಟರ್ ಹಾಗೂ ಜೆ.ಕೆ ಕನ್‌ಸಕನ್‌ನ ಮಾಲಕ  ಜಯಕುಮಾರ್ ನಾಯರ್‌ರವರು ಉಪಸ್ಥಿತರಿದ್ದರು.

Ad Widget

ಸ್ಯಾನಿಟರಿ ನ್ಯಾಪ್‌ಕಿನ್ ಬರ್ನಿಂಗ್ ಮೆಷಿನ್ ಪ್ರದರ್ಶನದಲ್ಲಿ ಕ್ರಾಂಪ್ಟನ್, ಫಿಲಿಪ್ಸ್, ಇಕೋಲಿಂಕ್, ಪೋಲಿಕ್ಯಾಬ್, ವಿಪ್ರೊ ಮುಂತಾದ ಹೆಸರಾಂತ ಕಂಪೆನಿಗಳ ಎಲ್‌ಇಡಿ ಲೈಟ್ಸ್‌ಗಳ ಪ್ರದರ್ಶನ ಹಾಗೂ ಮಾರಾಟವಿದೆ.ಅಲ್ಲದೆ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಸ್ಯಾನಿಟರಿ ನ್ಯಾಪ್‌ಕಿನ್ ಬರ್ನಿಂಗ್ ಮೆಷಿನ್ ಪ್ರದರ್ಶನ ಕೂಡ ಇಲ್ಲಿ ಲಭ್ಯವಿದೆ. ಜೊತೆಗೆ ಲಕ್ಕಿ ಡ್ರಾ ಮುಖಾಂತರ ಕ್ರಾಂಪ್ಟನ್ ಫ್ಯಾನ್ ವಿಜೇತರಾಗುವ ಸುವರ್ಣ ಅವಕಾಶವನ್ನು ಕೂಡ ಗ್ರಾಹಕರು ಪಡೆಯಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Ad Widget

Ad Widget

ಈ ನಾಲ್ಕು ದಿನಗಳ ಪ್ರದರ್ಶನ ಮೇಳದಲ್ಲಿ ಆಗಮಿಸುವ ಗ್ರಾಹಕರಿಗೆ ಉಚಿತಪ್ರವೇಶವಿದ್ದು, ಗ್ರಾಹಕರು ಕಡ್ಡಾಯವಾಗಿ ಕೋವಿಡ್ ನಿಯಮವನ್ನು ಪಾಲಿಸಿ ಸಹಕರಿಸಬೇಕು.ಹೆಚ್ಚಿನ ಮಾಹಿತಿಗಾಗಿ 9448546663, 9845522020 ನಂಬರಿಗೆ ಸಂಪರ್ಕಿಸಬಹುದು ಎಂದು ಸೌತ್‌ಕನರಾ ಸಂಸ್ಥೆಯ ಮುಖ್ಯಸ್ಥರಾದ ಪಶುಪತಿ ಶರ್ಮ ಹಾಗೂ ಅನ್ನಪೂರ್ಣ ಶರ್ಮರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Recent Posts

ದೇಶದಲ್ಲಿ ಹಿಂದೂಗಳ ಶಕ್ತಿ ಹೇಗಿರಬೇಕೆಂದರೆ ಸರ್ಕಾರ ಹಿಂದೂಗಳ ಹೇಳಿಕೆಯಂತೆ ನಡೆಯಬೇಕು..! : ದೇವಸ್ಥಾನಗಳನ್ನು ಸರಕಾರಿಕರಣಗೊಳಿಸಿದಂತೆ ಮಸೀದಿಗಳನ್ನು ಏಕೆ ಮಾಡುವುದಿಲ್ಲ..? ಮಂದಿರ ಸಂಸ್ಕೃತಿ ರಕ್ಷಣೆ ಸಭೆಯಲ್ಲಿ ಚರ್ಚೆ – ಮುಂಬೈಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿನ ಭ್ರಷ್ಟಾಚಾರ ಬೆಳಕಿಗೆ ತಂದಿರುವ ಸುಪ್ರಸಿದ್ಧ ಸರ್ಜನ್ ರ ಪುಸ್ತಕ ಬಿಡುಗಡೆ

error: Content is protected !!
%d bloggers like this: